ನಾಳೆ ಹಾರಕೂಡ ಚೆನ್ನಬಸವ ಶ್ರೀಗಳ ರಥೋತ್ಸವ

| Published : Mar 18 2024, 01:46 AM IST

ಸಾರಾಂಶ

ಹಾರಕೂಡ ಚೆನ್ನಬಸವ ಶಿವಯೋಗಿಗಳವರ ೭೩ನೇ ಜಾತ್ರೆ ರಥೋತ್ಸವವು ಮಾ.೧೯ರಂದು ಪಟ್ಟಣದ ಮುಲ್ಲಾಮಾರಿ ನದಿದಂಡೆಯಲ್ಲಿರುವ ತೇರಮೈದಾನ ಪಂಚಲಿಂಗೇಶ್ವರ (ಬುಗ್ಗಿ) ಹತ್ತಿರ ಸಂಜೆ ೬.೩೦ಕ್ಕೆ ನಡೆಯಲಿದೆ

ಕನ್ನಡಪ್ರಭ ವಾರ್ತೆ ಚಿಂಚೋಳಿ

ಹಾರಕೂಡ ಚೆನ್ನಬಸವ ಶಿವಯೋಗಿಗಳವರ ೭೩ನೇ ಜಾತ್ರೆ ರಥೋತ್ಸವವು ಮಾ.೧೯ರಂದು ಪಟ್ಟಣದ ಮುಲ್ಲಾಮಾರಿ ನದಿದಂಡೆಯಲ್ಲಿರುವ ತೇರಮೈದಾನ ಪಂಚಲಿಂಗೇಶ್ವರ (ಬುಗ್ಗಿ) ಹತ್ತಿರ ಸಂಜೆ ೬.೩೦ಕ್ಕೆ ನಡೆಯಲಿದೆ ಎಂದು ಮಠದ ಭಕ್ತರಾದ ಸುಭಾಷ ಸೀಳಿನ, ನಾಗರಾಜ ಕಲಬುರಗಿ ತಿಳಿಸಿದ್ದಾರೆ.

ಹಾರಕೂಡ ಮಠದ ಪೀಠಾಧಿಪತಿ ಡಾ. ಚೆನ್ನವೀರ ಶಿವಾಚಾರ್ಯರ ಸನ್ನಿಧಾನದಲ್ಲಿ ರಥೋತ್ಸವ ನಡೆಯಲಿರುವುದರಿಂದ ವಿವಿಧ ಕಾರ್ಯಕ್ರಮಗಳನ್ನು ನಡೆಯಲಿವೆ. ಉದಯಶಾಸ್ತ್ರಿಗಳು ಭೀಮಳ್ಳಿ ಇವರಿಂದ ಕಡಕೋಳ ಮಡಿವಾಳೇಶ್ವರ ಪುರಾಣ ಮತ್ತು ಮಲ್ಲಿಕಾರ್ಜುನ ಸ್ವಾಮಿ ಬೀದರ, ಶಿವಕುಮಾರ ಸ್ವಾಮಿ ಉಡಮನಳ್ಳಿ ನಡೆಯಲಿದೆ.

ಹಾರಕೂಡ ಚೆನ್ನಬಸವ ಶಿವಯೋಗಿಗಳರವರ ಜಾತ್ರೆ ನಿಮಿತ್ತ ಮಾ.೧೮ರಂದು ರಂಗೋಳಿ ಸ್ಪರ್ಧೆ, ಪಲ್ಲಕ್ಕಿ ಉತ್ಸವ, ಹಾಗೂ ಉಚ್ಛಾಯಿ ಮೆರವಣಿಗೆ ನಡೆಯಲಿದೆ. ಪಟ್ಟಣದ ವಿವಿಧ ಮುಖ್ಯರಸ್ತೆಗಳಲ್ಲಿ ಹಾರಕೂಡ ಭಜನಾ ಮಂಡಳಿ ಮತ್ತು ಸ್ಥಳೀಯ ಭಜನಾ ಮಂಡಳಿ ಜಗಜ್ಯೋತಿ ಬಸವೇಶ್ವರ ಭಜನಾ ಸಂಘ, ಬಸವನ ಸಂಗೋಳಿ ಮತ್ತು ಸುತ್ತಮುತ್ತಲಿನ ಗ್ರಾಮಗಳಿಂದ ಭಕ್ತರಿಂದ ಭಜನೆ ನಡೆಯಲಿವೆ.

ಮಾ.೧೯ರಂದು ಬೆಳಗ್ಗೆ ೮ಕ್ಕೆ ಸುಮಂಗಲೆಯರಿಂದ ಕುಂಭಾಭಿಷೇಕ, ತಾತನವರ ತೊಟ್ಟಿಲು ಕಾರ್ಯಕ್ರಮ ಮತ್ತು ಮಕ್ಕಳಿಗೋಸ್ಕರ ವಚನ ಸ್ಪರ್ಧೆ ಜಾತ್ರೆಗೆ ಬರುವ ಎಲ್ಲ ಭಕ್ತರಿಗೋಸ್ಕರ ಪ್ರಸಾದ ವಿತರಣೆ ನಡೆಯಲಿದೆ. ಸಂಜೆ ೬.೩೦ಕ್ಕೆ ವರ್ಣರಂಜಿತ ರಥೋತ್ಸವ ಜರಗುವುದು.

ಸಂಜೆ ೭ಕ್ಕೆ ನಡೆಯುವ ಶಿವನಾನುಭವ ಚಿಂತನ ಕಾರ್ಯಕ್ರಮದಲ್ಲಿ ಡಾ.ಚೆನ್ನವೀರ ಶಿವಾಚಾರ್ಯರು ಸಾನ್ನಿಧ್ಯ ವಹಿಸಲಿದ್ದು, ಡಾ.ಬಸವಲಿಂಗ ಅವದೂತರು, ಶಾಸಕ ಡಾ. ಅವಿನಾಶ ಜಾಧವ್, ಭಗವಂತ ಖುಬಾ, ಸಚಿವ ಡಾ. ಶರಣಪ್ರಕಾಶ ಪಾಟೀಲ, ಡಾ. ಉಮೇಶ ಜಾಧವ್, ಸುಭಾಷ ರಾಠೋಡ, ಡಾ.ವಿಕ್ರಮ ಪಾಟೀಲ, ಸಂಜೀವನ್ ಯಾಕಾಪೂರ ಭಾಗವಹಿಸಲಿದ್ದಾರೆ.

ಚೆನ್ನಶ್ರೀ ಪ್ರಶಸ್ತಿ: ಉದಯಕುಮಾರ ಶಾಸ್ತ್ರಿ ಭೀಮಳ್ಳಿ, ಮಲ್ಲಿಕಾರ್ಜುನ ಸ್ವಾಮಿ ಬೀದರ್‌, ಶಿವಕುಮಾರ ಸ್ವಾಮಿ ಉಡಮನಳ್ಳಿ, ಶಂಕರ ಕೋಡ್ಲಾ ಕಲಬುರಗಿ ಇವರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲಾಗುವುದು. ಮಾ.೨೦ರಂದು ಮುಂಜಾನೆ ಜಂಗಿ ಕುಸ್ತಿಗಳು ಮತ್ತು ಸಂಜೆ ರಸಮಂಜರಿ ಕಾರ್ಯಕ್ರಮಗಳು ನಡೆಯಲಿವೆ. ರಾತ್ರಿ೧೦.೩೦ಕ್ಕೆ ಸಾಹಿತಿ ಶಂಕರಜೀ ಹಿಪ್ಪರಗಿ ಕೃತಿ ಅನುಮಾನ ತಂದ ಆಪತ್ತು ಸಾಮಾಜಿಕ ನಾಟಕ ಪ್ರದರ್ಶವನ್ನು ಬಸ ನಿಲ್ದಾಣ ಹತ್ತಿರ ಬಯಲು ಪ್ರದೇಶದಲ್ಲಿ ನಡೆಯಲ್ಲಿದೆ.