ಸಾಧನೆ ಮಾಡಿದ ಕ್ರಿಕೆಟರ್‌ಗಳಿಗೆ ಸನ್ಮಾನ

| Published : Nov 04 2024, 12:46 AM IST

ಸಾಧನೆ ಮಾಡಿದ ಕ್ರಿಕೆಟರ್‌ಗಳಿಗೆ ಸನ್ಮಾನ
Share this Article
  • FB
  • TW
  • Linkdin
  • Email

ಸಾರಾಂಶ

ಬೆಂಗಳೂರಿನಲ್ಲಿ ನಡೆಯಲಿರುವ ಸ್ಟೇಟ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಗೆ ಗ್ರಾಮದ ಮೂವರು ಕ್ರಿಕೆಟ್ ಕ್ರೀಡಾಪಟುಗಳು ಆಯ್ಕೆಯಾಗಿದ್ದು, ಮತ್ತೊಬ್ಬ ಕ್ರೀಡಾಪಟು ಕ್ರಿಕೆಟ್‌ನಲ್ಲಿ ಉತ್ತಮ ಸಾಧನೆ ತೋರಿದ ಹಿನ್ನೆಲೆಯಲ್ಲಿ ಕೆಪಿಸಿಸಿ ಉಪಾಧ್ಯಕ್ಷ ಎಂ.ಬಿ.ಸೌದಾಗಾರ ಸನ್ಮಾನಿಸಿದರು.

ಕನ್ನಡಪ್ರಭ ವಾರ್ತೆ ಕಲಾದಗಿ

ಬೆಂಗಳೂರಿನಲ್ಲಿ ನಡೆಯಲಿರುವ ಸ್ಟೇಟ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಗೆ ಗ್ರಾಮದ ಮೂವರು ಕ್ರಿಕೆಟ್ ಕ್ರೀಡಾಪಟುಗಳು ಆಯ್ಕೆಯಾಗಿದ್ದು, ಮತ್ತೊಬ್ಬ ಕ್ರೀಡಾಪಟು ಕ್ರಿಕೆಟ್‌ನಲ್ಲಿ ಉತ್ತಮ ಸಾಧನೆ ತೋರಿದ ಹಿನ್ನೆಲೆಯಲ್ಲಿ ಕೆಪಿಸಿಸಿ ಉಪಾಧ್ಯಕ್ಷ ಎಂ.ಬಿ.ಸೌದಾಗಾರ ಸನ್ಮಾನಿಸಿದರು.ಬಾಗಲಕೋಟೆಯಲ್ಲಿ ನಡೆದ ಸಾಫ್ಟ್‌ ಟೆನ್ನಿಸ್ ಕ್ರಿಕೆಟ್ ಬಾಲ್ ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶನ ತೋರಿದ ಕಲಾದಗಿ ಗ್ರಾಮದ ಕ್ರಿಕೆಟ್ ಕ್ರೀಡಾಪಟು ಸೈಫುದ್ದೀನ್ ಕಾಲೇ ಸಾಬಣ್ಣವರ್, ಸಚಿನ್ ದೇಶಮುಖ್, ರಾಜು ಗೌಂಡಿ ಉತ್ತಮ ಪ್ರದರ್ಶನ ತೋರಿ ಆಯ್ಕೆಯಾಗಿದ್ದಾರೆ. ಶಿರಸಿಯಲ್ಲಿ ನಡೆದ ಲೆದರ್ ಬಾಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ೭೫ ಎಸೆತದಲ್ಲಿ ೧೫೬ ರನ್‌ಗಳನ್ನು ಗಳಿಸಿ ಉತ್ತಮ ಸಾಧನೆ ಮಾಡಿದ ರಿಜ್ವಾನ್ ಮಾಲ್ದಾರ್ ಅವರಿಗೆ ಕ್ರಿಕೆಟ್ ಬ್ಯಾಟ್ ನೀಡಿ ಮೆಚ್ಚುಗೆ ವ್ಯಕ್ತಪಡಿಸಿ ಸನ್ಮಾನಿಸಿದರು.

ಇದೇ ವೇಳೆ ಕೆಪಿಸಿಸಿ ಉಪಾಧ್ಯಕ್ಷ ಸೌದಾಗರ ಮಾತನಾಡಿ, ಇವತ್ತಿನ ದಿನಮಾನಗಳಲ್ಲಿ ಯಾವುದೇ ಕ್ರೀಡೆಗೆ ಬಹಳ ಮಹತ್ವವಿದೆ. ಕ್ರಿಕೆಟ್ ಬಹು ಮೆಚ್ಚುಗೆಯ ಕ್ರೀಡೆಯಾಗಿದ್ದು ಯುವಕರು ತಮ್ಮನ್ನು ತಾವು ಯಾವುದಾದರೂ ಒಂದು ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಉತ್ತಮ ಸಾಧನೆ ಮಾಡಬೇಕು ಎಂದು ಹೇಳಿದರು.ಈ ವೇಳೆ ಆಸೀಫ್‌ ರೋಣ, ಇಬ್ರಾಹಿಂ ಸೋಲ್ಜರ್, ಅಕ್ರಂ ಸೌದಾಗರ್, ಅಜೀಮ್ ರೋಣ, ಅನ್ವರ್ ಸೌದಾಗರ್ ರಿಯಾಜ್ ಪೀರ್‌ಜಾದೆ, ಜಾವಿದ್ ಸೌದಾಗರ್, ತೌಫಿಕ್ ಸೌದಾಗರ್ ಇನ್ನಿತರರು ಇದ್ದರು.