ಅನಧಿಕೃತವಾಗಿ ಸಾಗಿಸುತ್ತಿದ್ದ ನಗದು ವಶ

| Published : Apr 11 2024, 12:51 AM IST

ಸಾರಾಂಶ

ಅಥಣಿ: ಚುನಾವಣೆ ವಿಚಕ್ಷಣಾ ತಂಡ ದಾಳಿ ನಡೆಸಿ ಅನಧಿಕೃತವಾಗಿ ಕಾರಿನಲ್ಲಿ ಸಾಗಿಸುತ್ತಿದ್ದ ಹಣವನ್ನು ವಶಪಡಿಸಿಕೊಂಡಿದೆ.

ಕನ್ನಡಪ್ರಭ ವಾರ್ತೆ ಅಥಣಿ

ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯದರ್ಶಿ ರಾಹುಲ್‌ ಶಿಂಧೆ ಅಥಣಿ ತಾಲೂಕಿನ ವಿವಿಧ ಚೆಕ್‌ಪೋಸ್ಟ್‌ ಮತ್ತು ಮತಗಟ್ಟೆಗಳಿಗೆ ಭೇಟಿ ನೀಡಿ ಚುನಾವಣೆಯ ಅಧಿಕಾರಿಗಳ ಜೊತೆಗೆ ಸಭೆ ನಡೆಸಿದ್ದರು. ತಪಾಸಣೆ ಬಿಗಿಗೊಳಿಸಬೇಕು. ಅನಧಿಕೃತವಾಗಿ ಹಣ ಸಾಗಿವುದನ್ನು ಸಂಪೂರ್ಣ ತಡೆ ನೀಡಬೇಕು. ಕರ್ತವ್ಯದಲ್ಲಿ ಲೋಪ ಎಸಗಿದರೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಖಡಕ್‌ ಎಚ್ಚರಿಕೆ ನೀಡಿದ್ದರು. ಇದರ ಪರಿಣಾಮ 2 ದಿನಗಳಗಲ್ಲಿ ಚುನಾವಣೆ ವೀಕ್ಷಣೆ ತಂಡ ದಾಳಿ ನಡೆಸಿ ಅನಧಿಕೃತವಾಗಿ ಸಾಗಿಸುತ್ತಿದ್ದ ಹಣ ವಶಪಡಿಸಿಕೊಂಡಿದೆ. ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಬಿ.ಮೋರಟಗಿ ನೇತೃತ್ವದ ವೀಕ್ಷಣಾ ತಂಡ ತಂಗಡಿ-ಶಿನಾಳ ರಸ್ತೆಯಲ್ಲಿ ಭಾರತ ಪೆಟ್ರೋಲ್ ಬಂಕ್ ಬಳಿ ದಾಖಲೆ ಇಲ್ಲದೆ ಕಾರಿನಲ್ಲಿ ಸಾಗಿಸುತ್ತಿದ್ದ ₹3,56,800 ನಗದನ್ನು ವಶಪಡಿಸಿಕೊಂಡಿದ್ದಾರೆ. ವೀರಣ್ಣ ವಾಲಿ ತಂಡ ಸತ್ತಿ-ಜಮಖಂಡಿ ರಸ್ತೆ ಬಳಿ ರಾಯಲ್ ಕಾರ್ಯಾಲಯ ಬಳಿ ಕಾರಿನಲ್ಲಿ ಅನಧಿಕೃತವಾಗಿ ಸಾಗಿಸುತ್ತಿದ್ದ ₹2.80 ಲಕ್ಷ ನಗದು ವಶಪಡಿಸಿಕೊಂಡಿದ್ದಾರೆ.