ಸಾರಾಂಶ
ನರಸಿಂಹರಾಜಪುರ: ಪಟ್ಟಣದ ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ ನಡೆದ ಲೋಕ ಅದಾಲತ್ ಕಾರ್ಯಕ್ರಮದಲ್ಲಿ ಎರಡು ಜೋಡಿಗಳು ಒಂದಾದವು. ಶನಿವಾರ ನ್ಯಾಯಾಲಯದಲ್ಲಿ ತಾಲೂಕು ಸೇವಾ ಸಮಿತಿ ಹಾಗೂ ತಾಲೂಕು ವಕೀಲರ ಸಂಘದ ಸಂಯುಕ್ತಾಶ್ರಯದಲ್ಲಿ ಲೋಕ ಅದಾಲತ್ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಕೌಟುಂಬಿಕ ಪ್ರಕರಣದಡಿ ನ್ಯಾಯಾಲಯದ ಮೆಟ್ಟಿಲೇರಿದ್ದ ಡಿ.ಐಶ್ವರ್ಯ ಮತ್ತು ಎಸ್.ಸಂದೀಪ್- ರಮ್ಯ ಮತ್ತು ಸುನೀಲ್‌ಕುಮಾರ್ ಈ ದಂಪತಿಗಳನ್ನು ಕಾರ್ಯಕ್ರಮದ ಮೂಲಕ ಪರಸ್ಪರ ಇಬ್ಬರಿಗೂ ರಾಜಿ ಮಾಡಿಸಿ, ಸಮಾಲೋಚನೆ, ಸಂಧಾನ ನಡೆಸಿ, ಇಬ್ಬರ ಒಪ್ಪಿಗೆಯನ್ನು ಪಡೆದ ಕಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ತಾಲೂಕು ಕಾನೂನು ಸೇವಾ ಸಮಿತಿ ಸದಸ್ಯ ಕಾರ್ಯದರ್ಶಿ ದಾಸರಿಕ್ರಾಂತಿ ಕಿರಣ್ ಅವರು ಎರಡು ಜೋಡಿಗಳನ್ನು ಒಂದು ಗೂಡಿಸಿದರು. ಎರಡೂ ಜೋಡಿಗಳು ನ್ಯಾಯಾಲಯದಲ್ಲಿ ನ್ಯಾಯಾಧೀಶರ ಸಮ್ಮುಖದಲ್ಲಿ ಪರಸ್ಪರ ಹಾರ ಬದಲಾಯಿಸಿಕೊಂಡು ಒಂದಾದರು.ಈ ಸಂದರ್ಭದಲ್ಲಿ ಸರ್ಕಾರಿ ಅಭಿಯೋಜಕ ಗದಿಗೆಪ್ಪ ನೇಕಾರ್, ತಾಲೂಕು ವಕೀಲರ ಸಂಘದ ಅಧ್ಯಕ್ಷ ಎಸ್.ಎಸ್. ಸಂತೋಷ್‌ಕುಮಾರ್ ಹಾಗೂ ಇತರ ವಕೀಲರು ಇದ್ದರು.