ಸಾರಾಂಶ
ಕನ್ನಡಪ್ರಭ ವಾರ್ತೆ ಉಪ್ಪಿನಂಗಡಿ
ಇಲ್ಲಿನ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಾಲಯದಲ್ಲಿ ನಡೆಯುವ ಕಾಲಾವಧಿ ಜಾತ್ರೋತ್ಸವದ ಪ್ರಯುಕ್ತ ನಡೆಯುವ ದ್ವಜಾವರೋಹಣದ ನೆಲೆಯಲ್ಲಿ ನಡೆದ ಶ್ರೀ ದೇವರ ಅವಭೃತ ಸ್ನಾನವು ಮಂಗಳವಾರ ರಾತ್ರಿ ಸರಳವಾಗಿ ನಡೆಯಿತು.ವೇದಮೂರ್ತಿ ಕೆಮ್ಮಿಂಜೆ ಕಾರ್ತಿಕ್ ತಂತ್ರಿಗಳ ನೇತೃತ್ವದಲ್ಲಿ ಮಂಗಳವಾರ ರಾತ್ರಿ ದೇವರು ಬಲಿ ಹೊರಟು ರಥಬೀದಿಯಿಂದ ಹೊಸ ಬಸ್ ನಿಲ್ದಾಣದ ಶ್ರೀದೇವರ ಕಟ್ಟೆ ಹಾಗೂ ಹಳೆ ಬಸ್ ನಿಲ್ದಾಣದ ಶ್ರೀ ದೇವರ ಕಟ್ಟೆಯಲ್ಲಿ ಕಟ್ಟೆಪೂಜೆಯಾಗಿ ಸರ್ಕಾರಿ ಶಾಲಾ ಮಾರ್ಗವಾಗಿ ಬಂದು ಬಳಿಕ ನೇತ್ರಾವತಿ ನದಿ ಸ್ನಾನಘಟ್ಟದಲ್ಲಿ ಅವಭೃತ ಸ್ನಾನ ನಡೆಯಿತು.
ಪಾರಂಪರಿಕ ವ್ಯವಸ್ಥೆಯಲ್ಲಿ ತುಸು ಬದಲಾವಣೆ: ದೇವರ ಅವಭೃತ ಸ್ನಾನ ಪಾರಂಪರಿಕವಾಗಿ ನೇತ್ರಾವತಿ ಮತ್ತು ಕುಮಾರಧಾರಾ ನದಿ ಸಂಗಮ ಜಾಗದಲ್ಲಿ ನಡೆಯುತ್ತಿತ್ತು. ಆದರೆ ನದಿಯಲ್ಲಿ ಬಿಳಿಯೂರು ಅಣೆಕಟ್ಟೆಯ ಹಿನ್ನೀರು ನಿಂತಿರುವುದರಿಂದಾಗಿ ದೇವಸ್ಥಾನದ ಸ್ನಾನಘಟ್ಟದಲ್ಲಿ ನದಿಯಲ್ಲಿ ಗುರುತು ಮಾಡಲಾದ ಜಾಗದಲ್ಲಿ ತಂತ್ರಿಗಳ , ಅರ್ಚಕರ ಉಪಸ್ಥಿತಿಯಲ್ಲಿ ಶ್ರೀ ದೇವರ ಅವಭೃತ ಸ್ನಾನ ನಡೆಯಿತು.ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಕರುಣಾಕರ ಸುವರ್ಣ, ಮಾಜಿ ಸದಸ್ಯರಾದ ಹರಿರಾಮಚಂದ್ರ, ಡಾ. ರಾಜಾರಾಮ ಕೆ.ಬಿ., ಪ್ರೇಮಲತಾ ಕಾಂಚನ, ಜ್ಯೋತಿ ಹೇರಂಭ ಶಾಸ್ತ್ರಿ, ಸುನಿಲ್, ಉಷಾಚಂದ್ರ ಮುಳಿಯ, ಸುಂದರ ಗೌಡ, ಮಹೇಶ್ ಬಜತ್ತೂರು, ಪ್ರಮುಖರಾದ ರಾಮಚಂದ್ರ ಮಣಿಯಾಣಿ, ಸುದರ್ಶನ್, ಗೋಪಾಲ ಹೆಗ್ಡೆ, ಪ್ರಸಾದ್ ಪಚ್ಚಾಡಿ, ತಿಮ್ಮಪ್ಪ ಗೌಡ, ಗುಣಕರ ಅಗ್ನಾಡಿ, ಚಂದ್ರಶೇಖರ್ ಶೆಟ್ಟಿ, ಯತೀಶ್ ಶೆಟ್ಟಿ, ಸ್ವರ್ಣೇಶ್ , ಜೀವನ್ ಗಾಣಿಗ, ಗಂಗಾಧರ ಟೈಲರ್, ಮಾಧವ ಆಚಾರ್ಯ, ಶಶಿಧರ್ ಶೆಟ್ಟಿ, ಕೈಲಾರ್ ರಾಜಗೋಪಾಲ ಭಟ್, ದಯಾನಂದ್, ಹರೀಶ್ ಭಂಡಾರಿ, ಶಿವ ಕುಮಾರ್, ಕಿಶೋರ್ ಕುಮಾರ್, ಚಂದಪ್ಪ ಮೂಲ್ಯ ಮೊದಲಾದವರು ಉಪಸ್ಥಿತರಿದ್ದರು.
ದೇವಾಲಯದ ಕಾರ್ಯನಿರ್ವಹಣಾಧಿಕಾರಿ ಚೆನ್ನಪ್ಪ ಗೌಡ, ವ್ಯವಸ್ಥಾಪಕ ವೆಂಕಟೇಶ್ ರಾವ್, ಸಿಬ್ಬಂದಿ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.;Resize=(128,128))
;Resize=(128,128))
;Resize=(128,128))