ಸಾರಾಂಶ
ಕೈ ತೋಟವನ್ನು ಶಾಲೆಯ ಮಧ್ಯಾಹ್ನದ ಬಿಸಿ ಊಟಕ್ಕೆ ಬೇಕಾಗುವ ತರಕಾರಿ ಬೆಳೆದುಕೊಳ್ಳಲು ಉಳಿಸಿಕೊಳ್ಳುತ್ತೇವೆ ಕರಕುಚ್ಚಿ ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ನಮ್ಮ ಶಾಲೆ ನಮ್ಮ ಟ್ರಸ್ಟ್ ಅಧ್ಯಕ್ಷ ಎನ್.ವಿ.ಅರುಣ್ ಕುಮಾರ್ ಹೇಳಿದ್ದಾರೆ.
ಕರಕುಚ್ಚಿ ಗ್ರಾಮದಲ್ಲಿ ಬೆಳೆ ಸಂಗ್ರಹಾಲಯ- ಕೈತೋಟದ ಉದ್ಘಾಟನಾ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ, ತರೀಕೆರೆಕೈ ತೋಟವನ್ನು ಶಾಲೆಯ ಮಧ್ಯಾಹ್ನದ ಬಿಸಿ ಊಟಕ್ಕೆ ಬೇಕಾಗುವ ತರಕಾರಿ ಬೆಳೆದುಕೊಳ್ಳಲು ಉಳಿಸಿಕೊಳ್ಳುತ್ತೇವೆ ಕರಕುಚ್ಚಿ ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ನಮ್ಮ ಶಾಲೆ ನಮ್ಮ ಟ್ರಸ್ಟ್ ಅಧ್ಯಕ್ಷ ಎನ್.ವಿ.ಅರುಣ್ ಕುಮಾರ್ ಹೇಳಿದ್ದಾರೆ.
ಶಿವಮೊಗ್ಗ ಕೃಷಿ ಮಹಾವಿದ್ಯಾಲಯದ ಬಿ.ಎಸ್ಸಿ (ಕೃಷಿ) ಅಂತಿಮ ವರ್ಷದ ವಿಧ್ಯಾರ್ಥಿಗಳ ಗ್ರಾಮೀಣ ಕೃಷಿ ಕಾರ್ಯಾನು ಭವದ ಪ್ರಯುಕ್ತ ಸಮೀಪದ ಕರಕುಚ್ಚಿ ಗ್ರಾಮದಲ್ಲಿ ಬೆಳೆ ಸಂಗ್ರಹಾಲಯ ಮತ್ತು ಕೈ ತೋಟದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿ, ಕೃಷಿ ವಿವಿ ವಿದ್ಯಾರ್ಥಿಗಳ ಶ್ರಮವನ್ನು ಶ್ಲಾಘಿಸಿದರು.ಕೃಷಿ ಮಹಾವಿದ್ಯಾಲಯ ಶಿವಮೊಗ್ಗದ ತೋಟಗಾರಿಕೆ ವಿಭಾಗದ ಡಾ.ಚಂಪಾ ಬಿ ವಿ ಅವರು ಕೈ ತೋಟದ ಮಹತ್ವ ತಿಳಿಸಿ, ಕೈ ತೋಟವನ್ನು ಅಳವಡಿಸಿಕೊಳ್ಳಲು ಸಲಹೆ ನೀಡಿದರು. ಸಿರಿ ಧಾನ್ಯಗಳ ಉಪಯೋಗಗಳು ಹಾಗೂ ಅವುಗಳ ವರ್ಷವಾದ 2023ರ ಮಹತ್ವ ತಿಳಿಸಿಕೊಟ್ಟರು.ಬೇಸಾಯಶಾಸ್ತ್ರಜ್ಞ ಡಾ.ರುದ್ರೇಗೌಡ ಮಾತನಾಡಿ ದ್ವಿದಳ, ಏಕದಳ ಮತ್ತು ಸಿರಿ ಧಾನ್ಯಗಳು, ಎಣ್ಣೆ ಕಾಳುಗಳ ಬಗ್ಗೆ ಸಂಕ್ಷಿಪ್ತವಾಗಿ ವಿವರಿಸಿ, ಬೆಳೆ ಸಂಗ್ರಹಾಲಯ ಮತ್ತು ಕೈ ತೋಟಕ್ಕೆ ಸಹಾಯ ಮಾಡಿದ ಶಾಲಾ ಶಿಕ್ಷಕರಿಗೆ , ನಮ್ಮ ಶಾಲೆ ನಮ್ಮ ಟ್ರಸ್ಟ್ ಅಧ್ಯಕ್ಷ ಅರುಣ್ ಕುಮಾರ್ ಧನ್ಯವಾದ ತಿಳಿಸಿದರು
ಕೈ ತೋಟದಲ್ಲಿ ಬೆಳೆದ ತರಕಾರಿ ಬೆಂಡೆ, ಬದನೆ, ಮೆಣಸಿನಕಾಯಿ, ಬಳ್ಳಿ ಬೀನ್ಸ್, ಮೂಲಂಗಿ, ಟೊಮೆಟೊ, ನವಿಲು ಕೋಸು, ಜವಳಿ, ಕೊತ್ತಂಬರಿ, ದಂಟಿನ ಸೊಪ್ಪು ಮತ್ತು ಪಾಲಕ್ ಸೊಪ್ಪುಗಳ ಬಗ್ಗೆ ಸಂಕ್ಷಿ ಪ್ತವಾಗಿ ವಿವರಿಸಿದ ನಂತರ ಬೆಳೆ ಸಂಗ್ರಹಾಲಯದಲ್ಲಿ ಬೆಳೆದ ದ್ವಿದಳ ಧಾನ್ಯಗಳಾದ - ಹೆಸರು ಕಾಳು, ಉದ್ದಿನ ಕಾಳು, ಅಲಸಂದೆ, ಎಣ್ಣೆ ಕಾಳುಗಳಾದ - ಶೇಂಗಾ, ಎಳ್ಳು, ಸೂರ್ಯಕಾಂತಿ, ಸೋಯಾಬೀನ್, ಸಿರಿ ಧಾನ್ಯಗಳಾದ ಸಜ್ಜೆ, ಊದಲು, ಅರ್ಕ, ರಾಗಿ, ನವಣೆ, ಏಕದಳ ಧಾನ್ಯಗಳಾದ - ಜೋಳ, ಮೆಕ್ಕೆ ಜೋಳ, ಭತ್ತ, ಗೋಧಿ, ಮೇವಿನ ಬೆಳೆಗಳಾದ - ಮೇವಿನ ಜೋಳ, ಕುದುರೆ ಮೆಂತೆ, ಅಗಸೆ ಬೆಳೆಗಳ ಬಗ್ಗೆ ಶಾಲಾ ಮಕ್ಕಳಿಗೆ ಪರಿಚಯ ಮಾಡಿಕೊಡಲು ತಿಳಿಸಿದರು.ಮಿಶ್ರ ಬೆಳೆ ರೈತರು ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಮತ್ತು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಸಹಾಯಕ ವಾಗುತ್ತವೆ ಎಂದು ಅಂತಿಮ ವರ್ಷದ ವಿದ್ಯಾರ್ಥಿಗಳು ಸಭೆಯಲ್ಲಿ ತಿಳಿಸಿದರು. ಶಾಲೆ ಮುಖ್ಯೋಪಾಧ್ಯಾಯ ದೇವೇಂದ್ರ ನಾಯ್ಕ್ ಮಾತನಾಡಿದರು.
ಕಾರ್ಯಕ್ರಮದಲ್ಲಿ ಗ್ರಾಮೀಣ ಕೃಷಿ ಕಾರ್ಯಾನುಭವದ ಸಂಯೋಜಕ ಡಾ.ಗಜೇಂದ್ರ ಟಿ ಎಚ್, ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಮಕ್ಕಳು ಮತ್ತು ಶಿಕ್ಷಕರು, ಕೃಷಿ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಹಾಗೂ ಕರಕುಚ್ಚಿ ಗ್ರಾಮದ ಗ್ರಾಮಸ್ಥರು ಉಪಸ್ಥಿತರಿದ್ದರು.17ಕೆಟಿಆರ್.ಕೆ.2ಃ
ತರೀಕೆರೆಯ ಕರಕುಚ್ಚಿ ಗ್ರಾಮದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮವನ್ನು ನಮ್ಮ ಶಾಲೆ ನಮ್ಮ ಟ್ರಸ್ಟ್ ಅಧ್ಯಕ್ಷ ಎನ್.ವಿ.ಅರುಣ್ ಕುಮಾರ್ ಉದ್ಘಾಟಿಸಿದರು. ಶಾಲೆ ಮುಖ್ಯೋಪಾಧ್ಯಾಯ ದೇವೇಂದ್ರನಾಯ್ಕ್ಗಗ್ರಾಮೀಣ ಕೃಷಿ ಕಾರ್ಯಾನುಭವದ ಸಂಯೋಜಕ ಡಾ.ಗಜೇಂದ್ರ ಟಿ ಎಚ್ ಶಿವಮೊಗ್ಗ ಕೃಷಿ ಮಹಾವಿದ್ಯಾಲಯ ತೋಟಗಾರಿಕೆ ವಿಭಾಗದ ಡಾ.ಚಂಪಾ ಬಿ ವಿ.ಮತ್ತಿತರರು ಇದ್ದರು.