ಸಾರಾಂಶ
ನಾನು ಮನೆಯಲ್ಲಿದ್ದರು ತುಮಕೂರಿನ 8 ಕ್ಷೇತ್ರಗಳ ಮತದಾರರು ಮತ ಹಾಕುತ್ತಾರೆ ಎನ್ನುವಷ್ಟು ದುರಾಭಿಮಾನಿಯೂ ನಾನಲ್ಲ. ದುರಂಹಕಾರಿಯೂ ನಾನಲ್ಲ. ನನಗೆ ತುಮಕೂರು ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿ ಮುಖ್ಯ ಗುರಿಯಾಗಿದೆ. ಆ ರೀತಿ ನಾನು ಮಾತನಾಡಿಲ್ಲ. ಈ ರೀತಿ ಅಪಪ್ರಚಾರ ಮಾಡುವುದನ್ನು ನಿಲ್ಲಿಸಲಿ.
ಕನ್ನಡಪ್ರಭ ವಾರ್ತೆ ನಾಗಮಂಗಲತಾಲೂಕಿನ ಆದಿಚುಂಚನಗಿರಿ ಮಠಕ್ಕೆ ಕೊಡಗು-ಮೈಸೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್ ಒಡೆಯರ್ ಮತ್ತು ತುಮಕೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಭಾನುವಾರ ಪ್ರತ್ಯೇಕವಾಗಿ ಭೇಟಿ ನೀಡಿ ಶ್ರೀಕಾಲಭೈರವೇಶ್ವರಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದ ನಂತರ ಶ್ರೀನಿರ್ಮಲಾನಂದನಾಥ ಸ್ವಾಮೀಜಿ ಅವರ ಆಶಿರ್ವಾದ ಪಡೆದರು.
ಆದಿಚುಂಚನಗಿರಿ ಕ್ಷೇತ್ರದ ಶ್ರೀಕಾಲಭೈರವೇಶ್ವರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ ಅರ್ಚನೆ ಮಾಡಿಸಿದರು. ನಂತರ ಕ್ಷೇತ್ರಾಧಿ ದೇವತೆಗಳಿಗೆ ಪೂಜೆ ಸಲ್ಲಿಸಿ ನಂತರ ಶ್ರೀಬಾಲಗಂಗಾಧರನಾಥ ಸ್ವಾಮೀಜಿ ಅವರ ಗದ್ದುಗೆಗೆ ಪೂಜೆ ಸಲ್ಲಿಸಿದರು. ತದನಂತರ ಶ್ರೀನಿರ್ಮಲಾನಂದನಾಥ ಸ್ವಾಮೀಜಿ ಅವರ ಜತೆ ಕೆಲಕಾಲ ಚರ್ಚಿಸಿ ಶ್ರೀಗಳ ಆಶಿರ್ವಾದ ಪಡೆದರು.ಈ ವೇಳೆ ಅಭ್ಯರ್ಥಿ ವಿ.ಸೋಮಣ್ಣ ಮಾತನಾಡಿ, ಇದು ದೇಶದ ಚುನಾವಣೆಯಾಗಿದೆ. ಇದಕ್ಕೆ ಲೋಕಲ್ ವಿಚಾರಗಳನ್ನು ಅಡ್ಡ ತರುವುದು ಬೇಡ. ದೇಶದ ಹಿತದೃಷ್ಟಿಯಿಂದ ಬಿಜೆಪಿಗೆ ಜನ ಬೆಂಬಲ ನೀಡಲಿದ್ದಾರೆ ಎಂದರು.
ನಾನು ಮನೆಯಲ್ಲಿದ್ದರು ತುಮಕೂರಿನ 8 ಕ್ಷೇತ್ರಗಳ ಮತದಾರರು ಮತ ಹಾಕುತ್ತಾರೆ ಎನ್ನುವಷ್ಟು ದುರಾಭಿಮಾನಿಯೂ ನಾನಲ್ಲ. ದುರಂಹಕಾರಿಯೂ ನಾನಲ್ಲ. ನನಗೆ ತುಮಕೂರು ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿ ಮುಖ್ಯ ಗುರಿಯಾಗಿದೆ. ಆ ರೀತಿ ನಾನು ಮಾತನಾಡಿಲ್ಲ. ಈ ರೀತಿ ಅಪಪ್ರಚಾರ ಮಾಡುವುದನ್ನು ನಿಲ್ಲಿಸಲಿ ಎಂದರು.ಈ ವೇಳೆ ಆದಿಚುಂಚನಗಿರಿ ಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥಸ್ವಾಮೀಜಿ, ಮೈಸೂರು ಶಾಖಾಮಠದ ಸೋಮನಾಥ ಸ್ವಾಮೀಜಿ, ಮಾಜಿ ಸಚಿವ ಕೆ.ಗೋಪಾಲಯ್ಯ, ಶಾಸಕ ಸುರೇಶ್ ಗೌಡ, ಮಾಜಿ ಶಾಸಕ ಮಸಾಲೆ ಜಯರಾಂ ಇದ್ದರು.