5 ವರ್ಷದೊಳಗಿನ ಮಕ್ಕಳಿಗೆ ಲಸಿಕೆ ಹಾಕಿಸಿ

| Published : Mar 04 2024, 01:15 AM IST

ಸಾರಾಂಶ

ಪೋಲಿಯೋ ಮುಕ್ತ ಕಾರ್ಯಕ್ರಮಕ್ಕೆ ಪ್ರತಿಯೊಬ್ಬ ಪಾಲಕರು ತಮ್ಮ ೫ ವರ್ಷದ ಒಳಗಿನ ಎಲ್ಲಾ ಮಕ್ಕಳಿಗೂ ತಪ್ಪದೇ ಹನಿ ಹಾಕಿಸಿ ಆರೊಗ್ಯ ಕಾಪಾಡಬೇಕು

ಕನ್ನಡಪ್ರಭ ವಾರ್ತೆ ಚಿತ್ತಾಪುರ

ಸರ್ಕಾರವು ಮಕ್ಕಳು ಪೋಲಿಯೋಗೆ ತುತ್ತಾಗಿ ನರಳಬಾರದು ಎಂದು ಜಾರಿಗೆ ತಂದಿರುವ ಪೋಲಿಯೋ ಮುಕ್ತ ಕಾರ್ಯಕ್ರಮಕ್ಕೆ ಪ್ರತಿಯೊಬ್ಬ ಪಾಲಕರು ತಮ್ಮ ೫ ವರ್ಷದ ಒಳಗಿನ ಎಲ್ಲಾ ಮಕ್ಕಳಿಗೂ ತಪ್ಪದೇ ಹನಿ ಹಾಕಿಸಿ ಅರೊಗ್ಯ ಕಾಪಾಡಬೇಕು ಎಂದು ಅಲ್ಲೂರ(ಕೆ) ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಅಮೃತ ಹೇಳಿದರು.

ತಾಲೂಕಿನ ಡೊಣಗಾಂವ ಅಂಗನವಾಡಿ ಕೇಂದ್ರದಲ್ಲಿ ನಡೆದ ಪೋಲಿಯೋ ಹನಿ ಕಾರ್ಯಕ್ರಮದಲ್ಲಿ ಮಗುವಿಗೆ ಹನಿ ಹಾಕಿ ಮಾತನಾಡಿ ಸರ್ಕಾರವು ಜಾರಿಗೆ ತಂದಿರುವ ಯೊಜನೆಯಿಂದ ಬಹುಪಾಲು ಮಕ್ಕಳು ಪೋಲಿಯೋದಿಂದ ಮುಕ್ತರಾಗಿದ್ದಾರೆ. ೨ ಹನಿ ಹಾಕುವದರಿಂದ ತಮ್ಮ ಮಕ್ಕಳಿಗೆ ಪೋಲಿಯೋ ಮುಕ್ತರಾಗಿಸಬಹುದು ತಮ್ಮ ೫ ವರ್ಷದ ಒಳಗಿನ ಎಲ್ಲಾ ಮಕ್ಕಳಿಗೂ ಹನಿ ಹಾಕಿಸಬೇಕು. ಮತ್ತು ಅಲ್ಲದೇ ಅಂಗನವಾಡಿ ಕಾರ್ಯಕರ್ತರು ಎಲ್ಲಾ ಮಕ್ಕಳಿಗೂ ತಪ್ಪದೇ ಹನಿ ಹಾಕಲು ಪ್ರಯತ್ನಿಸಬೇಕು ಎಂದು ಹೇಳಿದರು.

ಹಿರಿಯ ಆರೊಗ್ಯ ನಿರೀಕ್ಷಕ ಗುಲಾಮ ಗೌಸ್, ಆರೊಗ್ಯ ಕಾರ್ಯಕರ್ತೆ ನೀಲಮ್ಮ ಕೊಳ್ಳಿ, ಸಂಗೀತಾ, ಅಂಗನವಾಡಿ ಕಾರ್ಯಕರ್ತೆ ಕಾಶಮ್ಮ ಚೌರಿ, ಬಸಮ್ಮ, ಜಯಶ್ರೀ, ಜ್ಯೋತಿ, ಈರಮ್ಮ, ಜಮುನಾಬಾಯಿ, ಉಮಶ್ರೀ, ಭಾಗಮ್ಮ ಮತ್ತು ಮಕ್ಕಳ ತಾಯಂದಿರು ಇದ್ದರು.