ಹಿರಿಯ ನೃತ್ಯಗುರು ವಿದುಷಿ ಕಮಲಾ ಭಟ್ ನಿಧನ

| Published : Dec 19 2024, 12:33 AM IST

ಹಿರಿಯ ನೃತ್ಯಗುರು ವಿದುಷಿ ಕಮಲಾ ಭಟ್ ನಿಧನ
Share this Article
  • FB
  • TW
  • Linkdin
  • Email

ಸಾರಾಂಶ

ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯಿಂದ ಕರ್ನಾಟಕ ಕಲಾಶ್ರೀ, ಪೇಜಾವರ ಶ್ರೀವಿಶ್ವೇಶ್ವರ ಶ್ರೀಪಾದರಿಂದ ಶ್ರೀ ರಾಮ ವಿಠಲ ಪುರಸ್ಕಾರ, ಶೃಂಗೇರಿ ಸಂಸ್ಥಾನದಿಂದ ಸನ್ಮಾನ, ಕಲ್ಕೂರ ಪ್ರತಿಷ್ಠಾನದಿಂದ ರಾಜ್ಯೋತ್ಸವ ಗೌರವ ಪುರಸ್ಕಾರ ಸಹಿತ ಅನೇಕ ಪುರಸ್ಕಾರಗಳಿಗೆ ಪಾತ್ರರಾಗಿದ್ದರು.

ಕನ್ನಡಪ್ರಭ ವಾರ್ತೆ ಮಂಗಳೂರು

ಹಿರಿಯ ನೃತ್ಯ ಗುರು ವಿದುಷಿ ಕಮಲಾ ಭಟ್ (70) ಅಲ್ಪಕಾಲದ ಅನಾರೋಗ್ಯದಿಂದ ಮಂಗಳವಾರ ರಾತ್ರಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಅವರು ರು ಓರ್ವ ಪುತ್ರ, ಸೊಸೆ ಸಿಂಧೂ, ಮೊಮ್ಮಕ್ಕಳು, ಅಪಾರ ಶಿಷ್ಯವರ್ಗವನ್ನು ಅಗಲಿದ್ದಾರೆ. ಅಂತ್ಯಕ್ರಿಯೆ ಬುಧವಾರ ಮಂಗಳೂರಿನಲ್ಲಿ ನಡೆಯಿತು. ಅವರು ಭರತಾಂಜಲಿ ನೃತ್ಯ ಸಂಸ್ಥೆ ಕೊಟ್ಟಾರ, ನೃತ್ಯ ಸುಧಾ ಮೇರಿಹಿಲ್, ಚಿಗುರು ನೃತ್ಯ ಸಂಸ್ಥೆ ಬೆಂಗಳೂರು ಸಂಸ್ಥೆಗಳ ಮಾರ್ಗದರ್ಶಕರಾಗಿದ್ದರು. ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯಿಂದ ಕರ್ನಾಟಕ ಕಲಾಶ್ರೀ, ಪೇಜಾವರ ಶ್ರೀವಿಶ್ವೇಶ್ವರ ಶ್ರೀಪಾದರಿಂದ ಶ್ರೀ ರಾಮ ವಿಠಲ ಪುರಸ್ಕಾರ, ಶೃಂಗೇರಿ ಸಂಸ್ಥಾನದಿಂದ ಸನ್ಮಾನ, ಕಲ್ಕೂರ ಪ್ರತಿಷ್ಠಾನದಿಂದ ರಾಜ್ಯೋತ್ಸವ ಗೌರವ ಪುರಸ್ಕಾರ ಸಹಿತ ಅನೇಕ ಪುರಸ್ಕಾರಗಳಿಗೆ ಪಾತ್ರರಾಗಿದ್ದರು.

ಸಂತಾಪ: ವಿದ್ವಾನ್ ಕಟೀಲು ಶ್ರಿಹರಿನಾರಾಯಣದಾಸ ಆಸ್ರಣ್ಣ, ಸಂಸದರಾದ ಕ್ಯಾ. ಬ್ರಿಜೇಶ್ ಚೌಟ, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ರಾಜ್ಯ ಉಪಾಧ್ಯಕ್ಷ ನ್ಯಾಯವಾದಿ ಮಹೇಶ್ ಕಜೆ, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ದ.ಕ ಜಿಲ್ಲಾ ಘಟಕದ ಶ್ರೀಧರ ಹೊಳ್ಳ, ಸಂಸ್ಕಾರ ಭಾರತಿ ಪ್ರಾಂತ್ಯ ಉಪಾಧ್ಯಕ್ಷ ಚಂದ್ರಶೇಖರ ಶೆಟ್ಟಿ, ಸಂಸ್ಕಾರ ಭಾರತಿ ಜಿಲ್ಲಾ ಪ್ರಮುಖ ನಾಗರಾಜ ಶೆಟ್ಟಿ, ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪ ಕುಮಾರ್ ಕಲ್ಕೂರ, ಮಂಗಳೂರಿನ ಕರ್ನಾಟಕ ಕರಾವಳಿ ನೃತ್ಯ ಕಲಾ ಪರಿಷತ್ ಸಂತಾಪ ವ್ಯಕ್ತಪಡಿಸಿದೆ.