ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವು : ವಡಗೇರಾದಲ್ಲಿ ಸಂಭಮ

| Published : Jun 05 2024, 12:31 AM IST

ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವು : ವಡಗೇರಾದಲ್ಲಿ ಸಂಭಮ
Share this Article
  • FB
  • TW
  • Linkdin
  • Email

ಸಾರಾಂಶ

ಲೋಕಸಭೆ ಚುನಾವಣೆ ಹಾಗೂ ಸುರಪುರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿನ ಹಿನ್ನೆಲೆ ವಡಗೇರಾ ಪಟ್ಟಣದಲ್ಲಿ ಸಂಭ್ರಮಾಚರಣೆ ಮಾಡಲಾಯಿತು.

ಕನ್ನಡಪ್ರಭ ವಾರ್ತೆ ವಡಗೇರಾ

ಲೋಕಸಭೆ ಚುನಾವಣೆ ಹಾಗೂ ಸುರಪುರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗಳ ಫಲಿತಾಂಶ ಪ್ರಕಟವಾದ ಹಿನ್ನೆಲೆ ಕಾಂಗ್ರೆಸ್ ಪಕ್ಷದ ರಾಯಚೂರು ಲೋಕಸಭೆ ಅಭ್ಯರ್ಥಿ ಜಿ. ಕುಮಾರ ನಾಯಕ್ ಹಾಗೂ ಸುರಪುರ ವಿಧಾನಸಭೆ ಉಪಚುನಾವಣೆ ಕಾಂಗ್ರೆಸ್ ಅಭ್ಯರ್ಥಿ ರಾಜಾ ವೇಣುಗೋಪಾಲ ನಾಯಕ ಗೆಲುವಿನ ಹಿನ್ನೆಲೆ ವಡಗೇರಾ ಪಟ್ಟಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಸಿಹಿ ಹಂಚಿ, ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದರು.

ಈ ವೇಳೆ ಕಾಂಗ್ರೆಸ್ ಮುಖಂಡ ಬಸವರಾಜ್ ನೀಲಹಳ್ಳಿ ಮಾತನಾಡಿ, ಕಾಂಗ್ರೆಸ್ ಪಕ್ಷದ ಸಾಧನೆಗಳೇ ನಮ್ಮ ಅಭ್ಯರ್ಥಿಗಳ ಗೆಲುವಿಗೆ ಪ್ರಮುಖ ಕಾರಣವಾಗಿದೆ. ಬಿಜೆಪಿ ಪಕ್ಷದವರ ಸುಳ್ಳಿಗೆ ಜನ ತಿರುಗೇಟು ನೀಡಿದ್ದಾರೆ. ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಕಲ್ಯಾಣ ಕರ್ನಾಟಕ ಭಾಗದ ಎಲ್ಲಾ ಲೋಕಸಭಾ ಸದಸ್ಯರನ್ನು ಗೆಲ್ಲಿಸುವ ಮೂಲಕ ಪಕ್ಷಕ್ಕೆ ಬಲವನ್ನು ತಂದು ಕೊಟ್ಟಿದ್ದಾರೆ. ಆ ಕಾರಣ ನಾನು ಮತದಾರ ಬಂಧುಗಳಿಗೆ ಹೃತ್ಪೂರ್ವಕ ಧನ್ಯವಾದಗಳು ತಿಳಿಸಿದರು.

ವಡಗೇರಾ ತಾಲೂಕಿನ ಸಮಸ್ಯೆಗಳನ್ನು ನೂತನ ಲೋಕಸಭಾ ಸದಸ್ಯರ ಗಮನಕ್ಕೆ ತಂದು ನಮ್ಮ ಭಾಗದ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಿ ಅಭಿವೃದ್ಧಿಪಡಿಸುವಂತೆ ಅವರಲ್ಲಿ ಮನವಿ ಮಾಡುತ್ತೇನೆ ಎಂದು ಹೇಳಿದರು.

ಕಾಂಗ್ರೆಸ್ ಮುಖಂಡರಾದ ದೇವೇಂದ್ರಪ್ಪ ಕಡೇಚೂರ, ಪಂಚ ಗ್ಯಾರಂಟಿಗಳ ಸದಸ್ಯ ಬನುರಾಜ ಸ್ವಾಮಿ, ನಿಂಗನಗೌಡ ಬೋರಡ್ಡಿ, ಸಂಗುಗೌಡ ಮಾಲಿ ಪಾಟೀಲ್, ಶಿವರಾಜ್ ನಾಡಗೌಡ, ಸೈಯದ್ ಸಾಬ್, ಮಹ್ಮದ್ ರಫಿ ನಾಯ್ಕೋಡಿ, ತಿರುಕಪ್ಪ ದೂರೆ, ಮಲ್ಲಪ್ಪ ಮಾಗನೂರ, ಜಯಕುಮಾರ್ ಮರ್ಕಲ್, ಮಲ್ಲಪ್ಪ ಕೊಪ್ಪೂರ, ಪೀರಸಾಬ್ ಮರಡಿ, ತಿಮ್ಮಣ್ಣ ಕಡೇಚೂರ, ಶರೀಫ್ ಕುರಿ, ರಾಜು ನಾಯಕ, ಸಾಹೇಬ್ ರೆಡ್ಡಿ ಹೊರಟುರ ಇತರರಿದ್ದರು.