ಸ್ವತಃ ಭತ್ತ ಬೆಳೆದು ಕಟಾವುಮಾಡಿದ ವಿನೋದ್ ರಾಜ್‌

| Published : Oct 12 2025, 01:00 AM IST

ಸ್ವತಃ ಭತ್ತ ಬೆಳೆದು ಕಟಾವುಮಾಡಿದ ವಿನೋದ್ ರಾಜ್‌
Share this Article
  • FB
  • TW
  • Linkdin
  • Email

ಸಾರಾಂಶ

ಹಿರಿಯ ಚಿತ್ರನಟಿ ದಿ.ಲೀಲಾವತಿ ಅವರ ಪುತ್ರ, ಕನ್ನಡ ಚಲನಚಿತ್ರ ರಂಗದ ಹಿರಿಯ ನಟ ವಿನೋದ್ ರಾಜ್ ಅವರು ತಾವೇ ಸ್ವತಃ ತಮ್ಮ ತೋಟದ ಜಮೀನಿನ ಗದ್ದೆಯಲ್ಲಿ ಭತ್ತ ಬೆಳೆದು, ಕಟಾವಿಗೂ ಮೊದಲು ಪೂಜೆ ನೆರವೇರಿಸಿ, ಭತ್ತವನ್ನು ಸ್ವತಃ ತಾವೇ ಕಟಾವು ಮಾಡಿ ರೈತರಿಗೆ ಮಾದರಿಯಾಗಿದ್ದಾರೆ.

ಕನ್ನಡಪ್ರಭ ವಾರ್ತೆ ದಾಬಸ್‍ಪೇಟೆ

ಹಿರಿಯ ಚಿತ್ರನಟಿ ದಿ.ಲೀಲಾವತಿ ಅವರ ಪುತ್ರ, ಕನ್ನಡ ಚಲನಚಿತ್ರ ರಂಗದ ಹಿರಿಯ ನಟ ವಿನೋದ್ ರಾಜ್ ಅವರು ತಾವೇ ಸ್ವತಃ ತಮ್ಮ ತೋಟದ ಜಮೀನಿನ ಗದ್ದೆಯಲ್ಲಿ ಭತ್ತ ಬೆಳೆದು, ಕಟಾವಿಗೂ ಮೊದಲು ಪೂಜೆ ನೆರವೇರಿಸಿ, ಭತ್ತವನ್ನು ಸ್ವತಃ ತಾವೇ ಕಟಾವು ಮಾಡಿ ರೈತರಿಗೆ ಮಾದರಿಯಾಗಿದ್ದಾರೆ. ಸೋಲದೇವನಹಳ್ಳಿಯಲ್ಲಿ ವಾಸವಾಗಿರುವ ನಟ ವಿನೋದ್ ರಾಜ್ ಅವರು ತಮ್ಮ ತೋಟದಲ್ಲಿ ತುಂತುರು ನೀರಾವರಿ ಪದ್ಧತಿಯಲ್ಲಿ ಅವರೇ ಉತ್ತಮ ತಳಿಯ ಭತ್ತವನ್ನು ನಾಟಿ ಮಾಡಿದ್ದರು. ಉತ್ತಮ ಭತ್ತದ ಬೆಳೆ ಬೆಳೆದಿದ್ದು, ಸಮಗ್ರ ಕೃಷಿ ಜೊತೆಗೆ ತೋಟಗಾರಿಕೆ ಬೆಳೆಗಳಿಗೆ ಮುಂದಾಗಿದ್ದಾರೆ. ಭತ್ತದ ಬೆಳೆಯ ಕಟಾವಿಗೂ ಮೊದಲು ಪೂಜೆ ಮಾಡಿ ತೋಟದ ಕೆಲಸಗಾರರ ಜೊತೆ ಭತ್ತವನ್ನು ಕಟಾವು ಮಾಡಿ ಅವರೇ ಗದ್ದೆಯಿಂದ ಟ್ರ್ಯಾಕ್ಟರ್ ಮೂಲಕ ಭತ್ತವನ್ನು ಮನೆಗೆ ರವಾನಿಸಿದ್ದಾರೆ.