ಸಾರಾಂಶ
ಕಾರ್ಕಳ : ಸದ್ವಿಚಾರ, ಉತ್ತಮ ಚಿಂತನೆಗಳು ಬದುಕಿನಲ್ಲಿ ರೂಢಿಸಿಕೊಂಡಲ್ಲಿ ಉತ್ತಮ ಪ್ರಜೆಯಾಗಬಹುದು. ಸದ್ಗುಣಗಳಿಂದ ಸಮಾಜದ ಏಳಿಗೆ ಸಾಧ್ಯವಿದೆ ಎಂದು ಉದ್ಯಮಿ ನಾಗೇಂದ್ರ ಕಾಮತ್ ರಂಜದಕಟ್ಟೆ ಅಭಿಪ್ರಾಯಪಟ್ಟಿದ್ದಾರೆ.
ಕಾರ್ಕಳ ತಾಲೂಕಿನ ಹಿರ್ಗಾನ ಆದಿಶಕ್ತಿ ಮಹಾಲಕ್ಷ್ಮಿ ದೇವಸ್ಥಾನದ ಶಿವಾನಂದ ಸರಸ್ವತಿ ಸಭಾಭವನದಲ್ಲಿ ಕಾರ್ಕಳ ರಾಜಪುರ ಸಾರಸ್ವತ ಸಂಘ ಹಾಗೂ ಸಪ್ತಪದಿ ವಿವಾಹ ಮಾಹಿತಿ ಕೇಂದ್ರ ಬೆಂಗಳೂರು ಸಹಯೋಗದಲ್ಲಿ ನಡೆದ ನಡೆದ ಸ್ವ ಸಮಾಜ ಬಾಂಧವರ ಸಪ್ತಪದಿ ವಧುವರರ ಅನ್ವೇಷಣೆ- 2025 ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮುಖ್ಯ ಅತಿಥಿ ಡಾ.ಜನಾರ್ದನ್ ಮಾತನಾಡಿ, ಆರ್ಥಿಕವಾಗಿ ದುರ್ಬಲರಾಗಿರುವಾಗ ಮದುವೆಯಾದರೆ, ಕುಟುಂಬದ ಜವಾಬ್ದಾರಿ ನಿಭಾಯಿಸಲು ಹೆಣಗಾಡಬಹುದು. ಹೀಗಾಗಿ ಹೆಚ್ಚಿನವರು ಜೀವನ ಮತ್ತು ವೃತ್ತಿಜೀವನದಲ್ಲಿ ಸ್ಥಿರವಾಗಿ ನೆಲೆಯೂರಿದ ನಂತರವೇ ತಡವಾಗಿ ಮದುವೆಯಾಗಲು ಪ್ರಯತ್ನಿಸುತ್ತಾರೆ. ತಡವಾಗಿ ಮದುವೆಯಾಗುವುದರಿಂದ ಆರೋಗ್ಯ ಯುತವಾದ ಮಕ್ಕಳ ಪಡೆಯುವ ಸಾಮರ್ಥ್ಯ ಕಡಿಮೆಯಾಗುತ್ತದೆ ಎಂದರು.
ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಪ್ರಕಾಶ್ ನಾಯಕ್, ರಾಜಪುರ ಸಾರಸ್ವತ ಸಂಘದ ಅ ಧ್ಯಕ್ಷ ಸದಾಶಿವ ಪ್ರಭು, ಸುಬ್ರಹ್ಮಣ್ಯ ಕುಳೇದು ಮಾತನಾಡಿದರು.
ಬಾಲ ನಟಿ ಸುಹಾನಿ ಮತ್ತು ಖ್ಯಾತ ತಬಲ ಸ್ಯಾಕ್ಸೋಫೋನ್ ವಾದಕ ಮಾಸ್ಟರ್ ಸಿದ್ಧಾರ್ಥ್ ಅವರನ್ನು ಅಭಿನಂದಿಸಲಾಯಿತು.
ಸುನಿಲ್ ಬೋರ್ಕಾರ್ ಪುತ್ತೂರು, ಮೋಹನ್‌ದಾಸ್ ನಾಯಕ್ ನಿರೂಪಿಸಿದರು. ಮುಂಬೈ, ಪೂನಾ, ಬೆಂಗಳೂರು, ಕಾಸರಗೋಡು, ಪುತ್ತೂರು ಸುಳ್ಯ, ಉಡುಪಿ, ಕಾರ್ಕಳ, ಮಣಿಪಾಲ ತೀರ್ಥಹಳ್ಳಿ, ಶಿವಮೊಗ್ಗ ಭಾಗಗಳ ವಿವಾಹ ಸಪ್ತಪದಿ ವಧುವರರ ಅನ್ವೇಷಣೆ ಕಾರ್ಯಕ್ರಮ ದಲ್ಲಿ ಒಟ್ಟು188 ವಧು ವರರು ನೋಂದಾಯಿಸಿದ್ದರು. ಪಾರ್ವತೀ ಸ್ವಯಂವರ ಪೂಜಾ ವಿಧಿವಿಧಾನಗಳು ನೆರವೇರಿದವು.