ಸಾರಾಂಶ
ಲೋಕಸಭೆ ಚುನಾವಣೆ ಮತದಾನ ಜಾಗೃತಿಗೆ ತಾಲೂಕಿನ ಬಾದನಹಟ್ಟಿ ಗ್ರಾಮದ ಕರೆಮಲೆ ಕುಟುಂಬದವರ ಮನೆಯಲ್ಲಿ ಜರುಗಿದ ವಿವಾಹ ಸಮಾರಂಭದ ವೇದಿಕೆ ಸಾಕ್ಷಿಯಾಯಿತು.
ಕುರುಗೋಡು:
ಲೋಕಸಭೆ ಚುನಾವಣೆ ಮತದಾನ ಜಾಗೃತಿಗೆ ತಾಲೂಕಿನ ಬಾದನಹಟ್ಟಿ ಗ್ರಾಮದ ಕರೆಮಲೆ ಕುಟುಂಬದವರ ಮನೆಯಲ್ಲಿ ಜರುಗಿದ ವಿವಾಹ ಸಮಾರಂಭದ ವೇದಿಕೆ ಸಾಕ್ಷಿಯಾಯಿತು.ಗ್ರಾಮದ ನರೇಗಾ ಯೋಜನೆಯಲ್ಲಿ ಬಿಎಫ್ಸಿ (ಬರಿಗಾಲು ತಾಂತ್ರಿಕ ಸಿಬ್ಬಂದಿ) ಯಾಗಿ ಕಾರ್ಯನಿರ್ವಹಿಸುವ ಕೋಟೇಶ್ ಜೊತೆ ಏಳುಬೆಂಚಿ ಗ್ರಾಮದ ನಾಗವೇಣಿ, ಬಾದನಹಟ್ಟಿಯ ಶಿವಕುಮಾರ್ ಜೊತೆ ದೇವಸಮುದ್ರ ಗ್ರಾಮದ ಚೈತ್ರಾ ಇವರ ಗುರುವಾರ ಜರುಗಿದ ವಿವಾಹ ಸಮಾರಂಭ ಮತದಾನ ಜಾಗೃತಿಗೆ ವೇದಿಕೆಯಾಗಿ ಪರಿವರ್ತನೆಯಾಗಿ ಗಮನ ಸೆಳೆಯಿತು.
ತಾಲ್ಲೂಕು ಸ್ವೀಪ್ ಸಮಿತಿ ನೋಡಲ್ ಅಧಿಕಾರಿ ಹಾಗೂ ತಾಪಂ ಇಒ ಕೆವಿ.ನಿರ್ಮಲಾ ಅವರ ನೇತೃತ್ವದಲ್ಲಿ ಸಿಬ್ಬಂದಿಮದುವೆ ಸಮಾರಂಭದಲ್ಲಿ ಭಾಗವಹಿಸಿ ಚುನಾವಣಾ ಪರ್ವ ದೇಶದ ಗರ್ವ’ ಚುನಾವಣಾ ಘೋಷಣೆ ಇರುವ ಭಿತ್ತಿಪತ್ರಗಳನ್ನು ವಧು ವರರಿಗೆ ನೀಡಿ ಮತದಾನ ಅರಿವು ಮೂಡಿದರು.
ಅಲ್ಲದೇ ಸಮಾರಂಭದಲ್ಲಿ ನೆರೆದಿದ್ದ ಸಾವಿರಾರು ಜನರಿಗೆ ಲೋಕಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಸಕ್ರೀಯವಾಗಿ ಭಾಗವಹಿಸಿ ಕಡ್ಡಾಯವಾಗಿ ಮತದಾನ ಮಾಡಿ ಎಂದು ಜಾಗೃತಿ ಮೂಡಿಸಿದರು.ನಂತರ ಮಾತನಾಡಿದ ತಾಪಂ ಇಒ ಕೆ.ವಿ. ನಿರ್ಮಲಾ, ಮತದಾನ ಪ್ರತಿಯೊಬ್ಬ ಪ್ರಜೆಯ ಕರ್ತವ್ಯವಾಗಿದೆ. ಎಲ್ಲರೂ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿ ಸಂವಿಧಾನದ ಆಶಯವನ್ನು ಎತ್ತಿಹಿಡಿಯಬೇಕು. ಮತದಾನ ಎಂಬುದು ಸಂವಿಧಾನ ನಮಗೆ ಕೊಟ್ಟ ಪರಮೋಚ್ಚ ಅಧಿಕಾರವಾಗಿದೆ. ಇದನ್ನು ಸರಿಯಾಗಿ ಬಳಸಿಕೊಂಡು ಅರ್ಹರನ್ನು ಚುನಾಯಿಸಬೇಕು ಎಂದು ಹೇಳಿದರು.
ನರೇಗಾ ಸಹಾಯಕ ನಿರ್ದೇಶಕ ಪಿ.ಶಿವರಾಮರೆಡ್ಡಿ, ತಾಲ್ಲೂಕು ಯೋಜನಾಧಿಕಾರಿ ರಾಧಿಕಾ, ಸಿಬ್ಬಂದಿ ಮಲ್ಲಿಕಾರ್ಜುನ, ಮುಕ್ತಾಯಕ್ಕ, ಚಂದ್ರಶೇಖರ್, ರಾಘವೇಂದ್ರ, ಮಾರೇಶ್, ಹೊನ್ನುರಸ್ವಾಮಿ, ಹಾಗಲೂರಪ್ಪ ಮತ್ತು ಹನುಮಂತ ಇದ್ದರು.