ಸಾರಾಂಶ
ಕಾಳಿಕಾಂಬಾ ವಿಶ್ವಕರ್ಮ ದೇವಸ್ಥಾನದ ೧೩ನೇ ವಾರ್ಷಿಕೋತ್ಸವ, ನೂತನ ಸಮುದಾಯ ಭವನ ಉದ್ಘಾಟನೆಕನ್ನಡಪ್ರಭ ವಾರ್ತೆ, ಶಿರಾಳಕೊಪ್ಪ
ಶಿರಾಳಕೊಪ್ಪ ಪಟ್ಟಣಕ್ಕೆ ₹೩೨ ಕೋಟಿ ವೆಚ್ಚದಲ್ಲಿ ಶರಾವತಿ ನದಿಯಿಂದ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಭರವಸೆ ನೀಡಿದ್ದಾರೆ.ಇಲ್ಲಿಯ ಕಾಳಿಕಾಂಬಾ ವಿಶ್ವಕರ್ಮ ದೇವಸ್ಥಾನದ ೧೩ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ನೂತನ ಸಮುದಾಯ ಭವನ ಉದ್ಘಾಟಿಸಿ ಮಾತನಾಡಿ, ಯೋಜನೆ ಜಾರಿಗೆ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ರಾಷ್ಟ್ರೀಯತೆ ವಿಷಯ ಬಂದಾಗ ವಿಶ್ವಕರ್ಮ ಸಮಾಜ ಎದ್ದು ನಿಲ್ಲುತ್ತದೆ. ನಮ್ಮ ಆಧ್ಯಾತ್ಮಿಕ ಶಕ್ತಿ ತೋರಿಸುವ ಕಾರ್ಯವಾಗಿದೆ. ಸಮಾಜದಿಂದ ಪಡೆದಿದ್ದನ್ನು ಮರಳಿ ಸಮಾಜಕ್ಕೆ ಕೊಡಲಾಗಿದೆ. ಈ ಸಮುದಾಯ ಭವನ ಅಚ್ಚುಕಟ್ಟಾಗಿ ಕಟ್ಟಲಾಗಿದೆ. ಇದು ಸಮಾಜದ ಎಲ್ಲ ವರ್ಗಕ್ಕೆ ದೊರಕುವಂತಾಗಲಿ ಎಂದು ತಿಳಿಸಿದರು.ಸಾನ್ನಿಧ್ಯ ವಹಿಸಿದ್ದ ಶಿವಸುಜ್ಞಾನ ತೀರ್ಥ ಸ್ವಾಮೀಜಿ ಮಾತನಾಡಿ ಜಗನ್ಮಾತೆ ಮನುಷ್ಯರಿಗೆ ಮಾತ್ರವೇ ಅನುಗ್ರಹ ನೀಡುವವಳಲ್ಲ. ಆದಿಶಕ್ತಿ ಬ್ರಹ್ಮ, ವಿಷ್ಣು, ಮಹೇಶ್ವರಿಗೂ ಶಕ್ತಿ ಕರುಣಿಸಿದವಳು. ಸಂಕಷ್ಟಗಳನ್ನು ದೂರ ಮಾಡುವ ಶಕ್ತಿ ಕಾಳಿಕಾದೇವಿಗೆ ಇದೆ ಎಂದರು. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಸಂಸದ ರಾಘವೇಂದ್ರ ಅವರು ವಿಶ್ವಕರ್ಮ ಸಮುದಾಯಕ್ಕೆ ಅಪಾರ ಸಹಕಾರ ನೀಡಿದ್ದಾರೆ ಎಂದು ಸ್ಮರಿಸಿದರು.
ಸ್ಥಳೀಯ ವೀರಕ್ತ ಮಠದ ಸ್ವಾಮೀಜಿ ಸಿದ್ದೇಶ್ವರ ದೇವರು ಮಾತನಾಡಿ, ಹಾಳುಬಿದ್ದ ಜಾಗದಲ್ಲಿ ದೇವಸ್ಥಾನ ಹೇಗೆ ಕಟ್ಟುತ್ತಾರೆ ಎನ್ನುತ್ತಿದ್ದರು. ಅಂಥ ಜಾಗದಲ್ಲಿ ಯಾವ ದೊಡ್ಡ ಸಮಾಜವೂ ಮಾಡದಂತಹ ಕಾರ್ಯವನ್ನು ಯಡಿಯೂರಪ್ಪ ಮತ್ತು ಸಂಸದ ರಾಘವೇಂದ್ರ ಅವರ ಸಹಕಾರದಿಂದ ಮಾಡಲಾಗಿದೆ. ಕೇಳದಿದ್ದರೂ ನಮ್ಮ ಮಠಕ್ಕೆ ₹೭೫ ಲಕ್ಷ ಹಣ ನೀಡಿ ಮಠದಲ್ಲಿ ಕಟ್ಟಡ ಕಟ್ಟಿಸಿಕೊಟ್ಟಿದ್ದಾರೆ. ಅವರ ಸಮಾಜಮುಖಿ ಕಾರ್ಯಕ್ಕೆ ಎಲ್ಲ ಗುರುಗಳ ಆಶೀರ್ವಾದವಿರುತ್ತದೆ ಎಂದರು.ಅಧ್ಯಕ್ಷತೆ ಕಾಳಿಕಾಂಬಾ ದೇವಾಲಯ ಸಮಿತಿ ಅಧ್ಯಕ್ಷ ನಾಗರಾಜ ವಹಿಸಿ ಮಾತನಾಡಿ, ಸಹಕಾರ ನೀಡಿದ ಎಲ್ಲರನ್ನು ಅಭಿನಂದಿಸಿದರು. ವಿಧಾನ ಪರಿಷತ್ತು ಸದಸ್ಯ ಡಿ.ಎಸ್. ಅರುಣ್, ಎಂಎಡಿಬಿ ಮಾಜಿ ಅಧ್ಯಕ್ಷ ಪದ್ಮನಾಭ ಭಟ್ ಸೇರಿದಂತೆ ಹಲವಾರು ಪ್ರಮುಖರು ಮಾತನಾಡಿದರು.
ವಿಶ್ವಕರ್ಮ ಸಮಾಜದ ಜಿಲ್ಲಾಧ್ಯಕ್ಷ ನಿರಂಜನಮೂರ್ತಿ, ಜಯಾನಂದ ಅರ್ಸಾಲಿ ಬಾರಂಗಿ, ಮಲ್ಲಿಕಾರ್ಜುನ, ರಾಜಶೇಖರಗೌಡ, ನಿವೇದಿತಾ ರಾಜು, ಚೆನ್ನವೀರ ಶೆಟ್ಟಿ, ಚಂದ್ರಶೇಖರ, ಅರುಣ್‌ಕುಮಾರ್, ಡಾ.ಶ್ರೀನಾ, ಡಾ.ಶಶಿಕಲಾ ಇನ್ನಿತರ ಪ್ರಮುಖರು ಹಾಜರಿದ್ದರು.- - - -4ಕೆಎಸ್‌ಎಚ್‌ಆರ್3:
ಕಾಳಿಕಾಂಬ ವಿಶ್ವಕರ್ಮ ಸಮಾಜದಿಂದ ಸಂಸದ ರಾಘವೇಂದ್ರ ದಂಪತಿಯನ್ನು ಸನ್ಮಾನಿಸಲಾಯಿತು.