ಕರಡಿ ದಾಳಿಯಿಂದ ಕಲ್ಲಂಗಡಿ ಬೆಳೆ ನಾಶ

| Published : Jul 07 2024, 01:17 AM IST

ಸಾರಾಂಶ

ಕೊಪ್ಪಳ ತಾಲೂಕಿನ ಸೂಳಿಕೇರಿ ತಾಂಡಾದ ಬಳಿ ರೈತರು ಬೆಳೆದಿದ್ದ ಕಲ್ಲಂಗಡಿ ತೋಟಕ್ಕೆ ಕರಡಿಗಳು ನುಗ್ಗಿ ನಾಶ ಮಾಡಿವೆ. ಇದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಲಕ್ಷಾಂತರ ರುಪಾಯಿ ಬೆಳೆ ನಾಶ, ರೈತರಿಗೆ ಸಂಕಷ್ಟ

ಕನ್ನಡಪ್ರಭ ವಾರ್ತೆ ಕೊಪ್ಪಳ

ತಾಲೂಕಿನ ಸೂಳಿಕೇರಿ ತಾಂಡಾದ ಬಳಿ ರೈತರು ಬೆಳೆದಿದ್ದ ಕಲ್ಲಂಗಡಿ ತೋಟಕ್ಕೆ ಕರಡಿಗಳು ನುಗ್ಗಿ ನಾಶ ಮಾಡಿವೆ. ಇದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ರೈತ ಶರಣಪ್ಪ ರಾಠೋಡ ಅವರ ಹೊಲದಲ್ಲಿ ಬೆಳೆದಿದ್ದ ಕಲ್ಲಂಗಡಿ ಬೆಳೆಯನ್ನು ಕರಡಿಗಳು ನುಗ್ಗಿ, ಸಂಪೂರ್ಣ ನಾಶ ಮಾಡಿವೆ. ಬಹುತೇಕ ಕಲ್ಲಂಗಡಿಯನ್ನು ತಿಂದಿದ್ದರೆ, ಇನ್ನು ಕೆಲವನ್ನು ನಾಶ ಮಾಡಿವೆ. ಇದರಿಂದ ಲಕ್ಷಾಂತರ ರುಪಾಯಿ ಬೆಳೆ ನಾಶವಾಗಿದೆ.

ಈ ಭಾಗದಲ್ಲಿ ಪ್ರತಿ ವರ್ಷವೂ ರೈತರು ಬೆಳೆಯುವ ಬೆಳೆಯನ್ನು ಕರಡಿಗಳು ನುಗ್ಗಿ ಹಾಳು ಮಾಡುವುದು ಸಾಮಾನ್ಯವಾಗಿದ್ದು, ಕರಡಿಯಿಂದ ನಮ್ಮ ಬೆಳೆ ರಕ್ಷಣೆ ಮಾಡಿ ಎಂದು ರೈತರು ಆಗ್ರಹಿಸುತ್ತಲೇ ಇದ್ದಾರೆ.

ಸಮಾಜಮುಖಿ ಕಾರ್ಯಕ್ಕೆ ಇನ್ನರ್‌ವೀಲ್‌ ಕ್ಲಬ್ ಅತ್ಯುತ್ತಮ ವೇದಿಕೆ:

ಸಮಾಜಮುಖಿ ಕಾರ್ಯ ಮಾಡುವುದಕ್ಕೆ ಇನ್ನರ್‌ವೀಲ್ ಅತ್ಯುತ್ತಮ ವೇದಿಕೆಯಾಗಿದೆ ಎಂದು ಭಾಗ್ಯನಗರ ಇನ್ನರ್‌ವೀಲ್‌ ಕ್ಲಬ್ ಅಧ್ಯಕ್ಷೆ ಶಾರದಾ ಪಾನಘಂಟಿ ಅಭಿಪ್ರಾಯಪಟ್ಟರು.ಭಾಗ್ಯನಗರದ ಪಾನಘಂಟಿ ಕಲ್ಯಾಣ ಮಂಟಪದಲ್ಲಿ ಇನ್ನರ್‌ವೀಲ್‌ ಕ್ಲಬ್ ವತಿಯಿಂದ ಅಭಿನಂದನಾ ಕಾರ್ಯಕ್ರಮ ಮತ್ತು ಭಾಗ್ಯನಗರ ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದರು. ಮಹಿಳೆಯರು ಕೇವಲ ಮನೆಗೆ ಸೀಮಿತವಾಗದೆ, ಸಮಾಜಮುಖಿ ಕಾರ್ಯದಲ್ಲಿಯೂ ತೊಡಗಿಕೊಳ್ಳಬೇಕು. ಉದ್ಯೋಗ ಮಾಡುವಲ್ಲಿ ಯಶಸ್ವಿಯಾಗಿರುವ ಮಹಿಳೆಯರು ಇಂದು ಸಮಾಜಮುಖಿಯ ಕಾರ್ಯದಲ್ಲಿ ಯಶಸ್ವಿಯಾಗುತ್ತಿದ್ದಾರೆ. ಅದಕ್ಕೆ ಇನ್ನರ್‌ವೀಲ್‌ ಕ್ಲಬ್ ಅತ್ಯುತ್ತಮ ಅವಕಾಶ ನೀಡುತ್ತದೆ ಎಂದರು.

ಜಿಲ್ಲಾ ಖಜಾಂಚಿ ಡಾ. ಪಾರ್ವತಿ ಪಲೋಟಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಹಿಳೆಯರು ಸಮಾಜದ ಜತೆ ಬೆರೆತು, ಕೌಶಲ್ಯ ಹೊರಹಾಕಲು ಹಾಗೂ ಪ್ರೀತಿ-ಸ್ನೇಹವನ್ನು ಹಂಚಲು ಸಂಘಟನಾ ಮನೋಭಾವ ಬೆಳೆಸಲು ಇಂತಹ ವೇದಿಕೆಗಳು ಅವಶ್ಯಕವಾಗಿವೆ ಎಂದರು.ವೈದ್ಯರು ಹಾಗೂ ಸಮಾಜಮುಖಿ ವ್ಯಕ್ತಿಗಳನ್ನು ಸನ್ಮಾನಿಸಲಾಯಿತು. ಸುವರ್ಣಾ ಗಂಟಿ ಇನ್ನರ್‌ವೀಲ್‌ ಕ್ಲಬ್‌ನ ೨೦೨೩-೨೪ನೇ ಸಾಲಿನ ವಾರ್ಷಿಕ ವರದಿ ಓದಿದರು.

ಕ್ಲಬ್‌ನ ನೂತನ ಅಧ್ಯಕ್ಷರಾಗಿ ಲಲಿತಾ ಕಬ್ಬೇರ್, ಕಾರ್ಯದರ್ಶಿಯಾಗಿ ಸಂಗೀತಾ ಕಬಾಡಿ, ಖಜಾಂಚಿಯಾಗಿ ಪದ್ಮಾವತಿ ಕಂಬಳಿ ಅಧಿಕಾರ ವಹಿಸಿಕೊಂಡರು. ಜ್ಯೋತಿ ಗೊಂಡಬಾಳ, ರೂಪಾ ಪವಾರ, ಜಯಮಾಲಾ ಶೇಡ್ಮಿ, ಶಾಂತಾ ಗೌರಿಮಠ, ರಮಾ ಅಂಟಾಳಮರದ, ಲಕ್ಷ್ಮೀ ಪಾನಘಂಟಿ, ಸುನೀತಾ ಅಂಟಾಳಮರದ, ವಿದ್ಯಾಲಕ್ಷ್ಮೀ ಹಾಗೂ ಮತ್ತಿತರರಿದ್ದರು.4ಕೆಪಿಎಲ್26

ಭಾಗ್ಯನಗರದ ಪಾನಘಂಟಿ ಕಲ್ಯಾಣಮಂಟಪದಲ್ಲಿ ಇನ್ನರ್‌ವೀಲ್‌ ಕ್ಲಬ್‌ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ನಡೆಯಿತು.