ಕಾಡಾನೆಗಳ ಹಾವಳಿ: ಕಾಫಿ ತೋಟಕ್ಕೆ ಹಾನಿ

| Published : Aug 13 2025, 12:30 AM IST

ಕಾಡಾನೆಗಳ ಹಾವಳಿ: ಕಾಫಿ ತೋಟಕ್ಕೆ ಹಾನಿ
Share this Article
  • FB
  • TW
  • Linkdin
  • Email

ಸಾರಾಂಶ

ಸೋಲಾರ್ ಬೇಲಿ ಬೇಧಿಸಿ ಒಳನುಗ್ಗಿರುವ 8 ಕಾಡಾನೆಗಳು ಮರಿ ಆನೆಗಳೊಂದಿಗೆ ಚಿನ್ನಾಟವಾಡಿದ ಪರಿಣಾಮ ಸುಮಾರು ಮೂನ್ನೂರಕ್ಕೂ ಅಧಿಕ ಕಾಫಿಗಿಡಗಳು ನಾಶವಾಗಿದ್ದರೆ, ನೂರಕ್ಕೂ ಅಧಿಕ ಸುಮಾರು 6 ವರ್ಷದ ಅಡಿಕೆ ಗಿಡಗಳು ನಾಶವಾಗಿವೆ.

ಕನ್ನಡಪ್ರಭ ವಾರ್ತೆ ಸಕಲೇಶಪುರ

ತಾಲೂಕಿನ ಇಬ್ಬಡಿ ಗ್ರಾಮದಲ್ಲಿ ಕಾಡಾನೆಗಳು ಕಾಫಿ ತೋಟಕ್ಕೆ ದಾಂಗುಡಿ ಇಟ್ಟ ಪರಿಣಾಮ ಬೆಳೆಗಾರ ಲಕ್ಷಾಂತರ ರುಪಾಯಿ ನಷ್ಟವಾಗಿದೆ.

ಗ್ರಾಮದ ಧರಣಿ ಎಂಬುವವರಿಗೆ ಸೇರಿದ ಕಾಫಿ ತೋಟಕ್ಕೆ ಭಾನುವಾರ ರಾತ್ರಿ ಸೋಲಾರ್ ಬೇಲಿ ಬೇಧಿಸಿ ಒಳನುಗ್ಗಿರುವ 8 ಕಾಡಾನೆಗಳು ಮರಿ ಆನೆಗಳೊಂದಿಗೆ ಚಿನ್ನಾಟವಾಡಿದ ಪರಿಣಾಮ ಸುಮಾರು ಮೂನ್ನೂರಕ್ಕೂ ಅಧಿಕ ಕಾಫಿಗಿಡಗಳು ನಾಶವಾಗಿದ್ದರೆ, ನೂರಕ್ಕೂ ಅಧಿಕ ಸುಮಾರು 6 ವರ್ಷದ ಅಡಿಕೆ ಗಿಡಗಳು ನಾಶವಾಗಿವೆ. ಸುಮಾರು 300 ಅಡಿಗೂ ಉದ್ದದ ಸೋಲಾರ್ ಬೇಲಿಯನ್ನು ಕಿತ್ತೆಸೆದು ಹಾಳು ಮಾಡಿದ್ದರೆ, ತೋಟದ ಗೇಟ್‌ನ್ನು ಕಿತ್ತೆಸೆದು ನಷ್ಟ ಉಂಟುಮಾಡಿವೆ.

ತೋಟದಲ್ಲಿ ಆಳವಡಿಸಿದ್ದ ಪೈಪ್‌ಲೈನ್‌ಗಳನ್ನು ಧ್ವಂಸ ಮಾಡಿದ್ದರೆ, ಸಾಕಷ್ಟು ಕಾಳುಮೆಣಸಿನ ಬಳ್ಳಿಗಳನ್ನು ಧರೆಗುರುಳಿವೆ. ಸುಮಾರು ಒಂದು ಗಂಟೆಗಳ ಕಾಲ ಕಾಡಾನೆಗಳ ನಡೆಸಿದ ಚಿನ್ನಾಟಕ್ಕೆ ಬೆಳೆಗಾರ ಲಕ್ಷಾಂತರ ರು. ನಷ್ಟ ಹೊಂದುವಂತಾಗಿದೆ. ಕಳೆದ ಒಂದು ದಶಕದಿಂದ ಕಾಡಾನೆಯ ತವರಾಗಿದ್ದ ಈ ಭಾಗ ಸದ್ಯ ಕಳೆದ ಒಂದು ವರ್ಷದಿಂದ ಕಾಡಾನೆ ಸಮಸ್ಯೆ ನಿಯಂತ್ರಣಕ್ಕೆ ಬಂದಿತ್ತು. ಆದರೆ, ಒಂದು ತಿಂಗಳಿನಿಂದ ಮತ್ತೆ ಈ ಭಾಗದಲ್ಲಿ ಬೀಡುಬಿಟ್ಟಿರುವ ಕಾಡಾನೆಗಳು ಏಕಾಏಕಿ ಒಂದು ತೋಟದಲ್ಲಿ ಭಾರಿ ಪ್ರಮಾಣದ ಹಾನಿ ಮಾಡಿರುವುದು ಇತ್ತೀಚೆಗೆ ಇದೇ ಮೊದಲು ಎಂಬುದು ಈ ಭಾಗದ ಬೆಳೆಗಾರರ ದೂರಾಗಿದೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳು, ಕಾಫಿ ಮಂಡಳಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.