ಸಾರಾಂಶ
ಹರಿಹರ: ನಾಡಿನಾದ್ಯಂತ ಮಳೆ, ಬೆಳೆ ಉತ್ತಮವಾಗಿರಲು, ಜನರು ಸುಶಿಕ್ಷಿತ ಜೀವನ ನಡೆಸಲು ನಗರದ ಐತಿಹಾಸಿಕ ಹರಿಹರೇಶ್ವರ ಸ್ವಾಮಿ ದೇವಾಲಯದ ಆವರಣದಲ್ಲಿ ಏ.9ರಿಂದ 16ರವರೆಗೆ ಅರ್ಚಕರ ತಂಡದಿಂದ ಅತಿರುದ್ರಾಭಿಷೇಕ, ಹೋಮ ಹವನ ಮುಂತಾದ ಧಾರ್ಮಿಕ ಕಾರ್ಯ ನಡೆಸಲಾಗುವುದೆಂದು ಅತಿರುದ್ರಾನುಷ್ಠಾನ ಸಮಿತಿಯ ಅಧ್ಯಕ್ಷ ಡಾ.ನಾರಾಯಣ ಜೋಯಿಸ್ ಹೇಳಿದರು.
ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 9ರಂದು ಬೆಳಗ್ಗೆ ೮ಕ್ಕೆ ದೇವರಿಗೆ ಫಲ ಸಮರ್ಪಣೆ, ಸಂಕಲ್ಪ, ಪಂಚಾಮೃತ ರುದ್ರಾಭಿಷೇಕ ನಡೆಯಲಿದೆ. ಏ.10ರಂದು ಬೆಳಗ್ಗೆ ೭ಕ್ಕೆ ಸ್ಥಳ ಶುದ್ಧಿ, ಗಣಪತಿ ಪೂಜೆ, ಅಭಿಷೇಕ ಸಂಕಲ್ಪ ಮತ್ತು ಕಲಾಭಿವೃದ್ಧಿ ಹೋಮ, ಸಹಸ್ರ ಮೋದಕದಿಂದ ಗಣಪತಿ ಹೋಮ, ಪೂರ್ಣಾಹುತಿ ಸಂಜೆ ೬.೩೦ಕ್ಕೆ ಅಘೋರಾಸ್ತ್ರ ಹೋಮ, ಉದಕ ಶಾಂತಿ ಪೂಜೆ ನಡೆಯಲಿದೆ.ಏ.೧೧ರಂದು ಬೆಳಗ್ಗೆ ೬.೩೦ಕ್ಕೆ ಮಹಾಗಣಪತಿ ಪೂಜೆ, ಸ್ವಸ್ತಿ ಪುಣ್ಯಾಹ ವಾಚನ, ಮಾತೃಕಾ ಪೂಜೆ, ನಾಂದಿ ಸಮಾರಾಧನಾ ಸೇರಿದಂತೆ ವಿವಿಧ ಅಧ್ಯಾತ್ಮಿಕ ಪ್ರಕ್ರಿಯೆ ನಡೆಯಲಿದೆ. ಯಾಗ ಮಂಟಪವನ್ನು ನಾರಾಯಣ ಆಶ್ರಮದ ಸದ್ಗುರು ಪ್ರಭುದತ್ತ ಮಹಾರಾಜ್ ಉದ್ಘಾಟಿಸುವರು. ಸಂಜೆ ೬.೩೦ಕ್ಕೆ ರುದ್ರಕಮಾರ್ಚನೆ ಸಾಂಸ್ಕೃತಿಕ ಕಾರ್ಯಕ್ರಮ, ಮಹಾಮಂಗಳಾರತಿ ನಡೆಯಲಿದೆ.
ಏ.೧೨ರಂದು ಬೆಳಗ್ಗೆ ೭ರಿಂದ ಮಹಾನ್ಯಾಸ ಪೂರ್ವಕ ಅತಿರುದ್ರಾಭಿಷೇಕ, ಬಿಲ್ವಾರ್ಚಾನೆ ಮಹಾಮಂಗಳಾರತಿ ಸೇರಿದಂತೆ ವಿವಿಧ ಪೂಜೆ, ಏ.೧೩ರಂದು ಬೆಳಗ್ಗೆ ೭ರಿಂದ ರುದ್ರಾಭಿಷೇಕ, ವಿವಿಧ ಬಗೆಯ ಹೋಮ ಹವನ ನಂತರ ಮಹಾಮಂಗಳಾರತಿ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯುತ್ತವೆ.ಏ.೧೪ರಂದು ಬೆಳಗ್ಗೆ ೭ಕ್ಕೆ ಪೂರ್ವಕ ಅತಿರುದ್ರಾಭಿಷೇಕ ವಿವಿಧ ಬಗೆಯ ಹೋಮ ಹವನಗಳು ನಡೆಯಲಿದ್ದು, ನಂತರ ಬೆಂಗಳೂರಿನ ಕೂಡಲಿ ಶೃಂಗೇರಿ ಮಹಾಸಂಸ್ಥಾನದ ವಿದ್ಯಾವಿಶ್ವೇಶ್ವರ ಭಾರತಿ ಶ್ರೀಗಳ ಪುರಪ್ರವೇಶ, ಸಂಜೆ ಗಿರಿಜಾ ಕಲ್ಯಾಣೋತ್ಸವ ಮಹಾಮಂಗಳಾರತಿ.
ಏ.೧೫ರಂದು ಬೆಳಗ್ಗೆ ೬.೩೦ಕ್ಕೆ ವಿದ್ಯಾವಿಶ್ವೇಶ್ವರ ಭಾರತಿ ಸ್ವಾಮೀಜಿ ಉಪಸ್ಥಿತಿಯಲ್ಲಿ ಅಭಿಷೇಕ, ಮಹಾಮೃತ್ಯಂಜಯ ಹೋಮಾದಿಗಳ, ಸಂಜೆ ಅಲಂಕೃತ ಪಲ್ಲಕ್ಕಿ ಮೆರವಣಿಗೆ ಅಷ್ಟಾವಧಾನ ಸೇವೆ ನಡೆಯಲಿದೆ. ಏ.೧೬ರಂದು ಬೆಳಿಗ್ಗೆ ೬.೩೦ ಕ್ಕೆ ಧಾರವಾಡದ ನ್ಯಾಯಚುಡಾಮಣಿ ರಾಜೇಶ್ವರ ಶಾಸ್ತ್ರಿ ಹಾಗೂ ವೇಣಿಮಾಧವ ಶಾಸ್ತ್ರಿಗಳ ಉಪಸ್ಥಿತಿಯಲ್ಲಿ ಮಹಾನ್ಯಾಸ ಪೂರ್ವಕ ಅತಿರುದ್ರಾಭಿಷೇಕ, ಚಂಡಿಕಾ ಹೋಮ, ಹವನಾದಿಗಳು, ನಂತರ ವಿದ್ಯಾವಿಶ್ವೇಶ್ವರ ಭಾರತಿ ಶ್ರೀಗಳಿಂದ ಪೂರ್ಣಾಹುತಿ, ಅನುಗ್ರಹ ಭಾಷಣ ಹಾಗೂ ಆಶೀರ್ವಚನ ನಡೆಯಲಿದೆ ಎಂದರು.ಸಮಿತಿಯ ಪದಾಧಿಕಾರಿಗಳಾದ ಶ್ರೀಧರಮೂರ್ತಿ ಎಸ್.ಕೆ.ಡಾ.ಹರಿಶಂಕರ್ ಜೋಯಿಸ್, ಶಂಕರ್ ದೇಸಾಯಿ, ಆನಂತ್ ನಾಯ್ಕ್.ಕೆ, ವಿಶ್ವನಾಥ್ ಶಾಸ್ತ್ರಿ ಹಾಗೂ ಇತರರಿದ್ದರು.