21ಕ್ಕೆ ಹೆಡಗಿಮದ್ರಾ ಶಾಂತಶಿವಯೋಗೀಶ್ವರ ಜಾತ್ರೆಯಾದಗಿರಿ: ತಾಲೂಕಿನ ಹೆಡಗಿಮದ್ರಾ ಶ್ರೀ ಶಾಂತಶಿವಯೋಗೀಶ್ವರ ಜಾತ್ರೆ ಫೆ.21ರಂದು ನಡೆಯಲಿದ್ದು, ಅಂದು ಸಂಜೆ 7 ಗಂಟೆಗೆ ಶ್ರೀಮಠದ ಪೀಠಾಧಿಪತಿಗಳಾದ ಶಾಂತಮಲ್ಲಿಕಾರ್ಜುನ ಪಂಡಿತಾರಾಧ್ಯ ಸ್ವಾಮೀಜಿ ನೇತೃತ್ವದಲ್ಲಿ ಭವ್ಯ ರಥೋತ್ಸವ ಜರುಗಲಿದೆ ಎಂದು ಶ್ರೀಮಠದ ಭಕ್ತರಾದ ರಾಚನಗೌಡ ಮುದ್ನಾಳ ತಿಳಿಸಿದರು.