ಯುವ ಪ್ರತಿಭೆಗಳು ವೇದಿಕೆ ಸದ್ಬಳಕೆ ಮಾಡಿ: ಯಶ್ಪಾಲ್‌ ಕರೆ

| Published : Nov 20 2023, 12:45 AM IST

ಯುವ ಪ್ರತಿಭೆಗಳು ವೇದಿಕೆ ಸದ್ಬಳಕೆ ಮಾಡಿ: ಯಶ್ಪಾಲ್‌ ಕರೆ
Share this Article
  • FB
  • TW
  • Linkdin
  • Email

ಸಾರಾಂಶ

ಯುವಜನತೆ ದೇಶದ ಸಂಪತ್ತು. ವಿಶ್ವದಲ್ಲಿಯೇ ನಮ್ಮ ದೇಶದಲ್ಲಿ ಯುವ ಸಂಪತ್ತು ಹೆಚ್ಚಿದೆ. ಅವರಿಗೆ ಸರಿಯಾದ ಮಾರ್ಗದರ್ಶನ ಪ್ರೋತ್ಸಾಹ ನೀಡಿದರೆ ಅವರನ್ನು ದೇಶದ ಆಸ್ತಿಯಾಗಿ ಅಭಿವೃದ್ಧಿಯಲ್ಲಿ ತೊಡಗಿಸಕೊಳ್ಳಬಹುದಾಗಿದೆ ಎಂದು ಶಾಸಕ ಯಶ್ಪಾಲ್ಲ್‌ ಸುವರ್ಣ ಹೇಳಿದರು.

ಕನ್ನಡಪ್ರಭ ವಾರ್ತೆ ಉಡುಪಿ

ಯುವಜನರ ಪ್ರತಿಭೆಯ ಅನಾವರಣಕ್ಕೆ ಯುವ ಜನೋತ್ಸವ ಉತ್ತಮ ವೇದಿಕೆ, ಇಂತಹ ವೇದಿಕೆಯನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಶಾಸಕ ಯಶ್ಪಾಲ್ ಸುವರ್ಣ ಕರೆ ನೀಡಿದ್ದಾರೆ.

ನಗರದ ಅಮೃತ್ ಗಾರ್ಡನ್‌ನಲ್ಲಿ ಜಿಲ್ಲಾಡಳಿತ ವತಿಯಿಂದ ನಡೆದ ಜಿಲ್ಲಾಮಟ್ಟದ ಯುವ ಜನೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು.

ಯುವಜನತೆ ದೇಶದ ಸಂಪತ್ತು. ವಿಶ್ವದಲ್ಲಿಯೇ ನಮ್ಮ ದೇಶದಲ್ಲಿ ಯುವ ಸಂಪತ್ತು ಹೆಚ್ಚಿದೆ. ಅವರಿಗೆ ಸರಿಯಾದ ಮಾರ್ಗದರ್ಶನ ಪ್ರೋತ್ಸಾಹ ನೀಡಿದರೆ ಅವರನ್ನು ದೇಶದ ಆಸ್ತಿಯಾಗಿ ಅಭಿವೃದ್ಧಿಯಲ್ಲಿ ತೊಡಗಿಸಕೊಳ್ಳಬಹುದಾಗಿದೆ ಎಂದರು.

ಲಯನ್ಸ್ ಅಮೃತ್ ಅಧ್ಯಕ್ಷೆ ಭಾರತಿ ಹರೀಶ್, ಸದಸ್ಯ ವಿಜಯ ಪ್ರಕಾಶ್ ಭಂಡಾರಿ, ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ರೋಶನ್ ಕುಮಾರ್ ಶೆಟ್ಟಿ ನಿರೂಪಿಸಿ, ವಂದಿಸಿದರು.

ಜನಪದ ನೃತ್ಯ, ಜನಪದ ಹಾಡು, ಕಥೆ ಬರೆಯುವುದು, ಭಿತ್ತಿ ಪತ್ರ ತಯಾರಿಕೆ, ಘೋಷಣೆ ಹಾಗೂ ಛಾಯಾ ಚಿತ್ರ ಸ್ಪರ್ಧೆಗಳು ನಡೆದವು.ಫೋಟೋ- ಯುವಜನ

ಜಿಲ್ಲಾ ಯುವಜನೋತ್ಸವವನ್ನು ಶಾಸಕ ಯಶಪಾಲ್ ಸುವರ್ಣ ಉದ್ಘಾಟಿಸಿದರು.