ನಾನೂ ಲೋಕಸಭಾ ಟಿಕೆಟ್‌ ಆಕಾಂಕ್ಷಿ: ಶಿವಶಂಕರರೆಡ್ಡಿ

| Published : Jan 24 2024, 02:01 AM IST

ನಾನೂ ಲೋಕಸಭಾ ಟಿಕೆಟ್‌ ಆಕಾಂಕ್ಷಿ: ಶಿವಶಂಕರರೆಡ್ಡಿ
Share this Article
  • FB
  • TW
  • Linkdin
  • Email

ಸಾರಾಂಶ

ನಾನೂ ಸಹ ಚಿಕ್ಕಬಳ್ಳಾಪುರ ಲೋಕಸಭಾ ಚುನಾವಣೆಯ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದು ಹೈಕಮಾಂಡ್‌ಗೆ ಮನವಿ ಸಲ್ಲಿಸಿದ್ದೇನೆ ಸಕಾರಾತ್ಮಕವಾದ ರೀತಿಯಲ್ಲಿ ಪಕ್ಷದ ಮುಖಂಡರು ಸ್ಪಂದಿಸಿದ್ದಾರೆ

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಕಾಂಗ್ರೆಸ್‌ನಿಂದ ಉಚ್ಚಾಟಿತರಾದ ತಾಲೂಕಿನ ಮುಖಂಡರುಗಳನ್ನು ಹೈಕಮಾಂಡ್ ಮತ್ತೆ ಪಕ್ಷಕ್ಕೆ ವಾಪಸ್ ಕರೆಸಿಕೊಳ್ಳುತ್ತಿರುವ ವಿಷಯದ ನನಗೆ ಗೊತ್ತಿಲ್ಲ ಎಂದು ಮಾಜಿ ಶಾಸಕ ಎನ್.ಎಚ್.ಶಿವಶಂಕರ ರೆಡ್ಡಿ ತಿಳಿಸಿದರು. ಗೌರಿಬಿದನೂರು ನಗರದ ನದಿ ದಡ ಆಂಜನೇಯ ಸ್ವಾಮಿ ದೇವಸ್ಥಾನದ ಸಭಾಂಗಣದಲ್ಲಿ ಕರೆದಿದ್ದ ತಾಲೂಕು ಕಾಂಗ್ರೆಸ್ ಕಾರ್ಯಕರ್ತರ ಮತ್ತು ಮುಖಂಡರ ಸಭೆಯಲ್ಲಿ ಮಾತನಾಡಿ, ಈಗಾಗಲೇ ಹೈಕಮಾಂಡ್ ಉಚ್ಚಾಟಿತರನ್ನು ಮತ್ತೆ ಕಾಂಗ್ರೆಸ್‌ಗೆ ವಾಪಸ್ಸಾಗುವಂತೆ ಉಚ್ಚಾಟನೆ ತೆರವು ಮಾಡಿದೆಯಲ್ಲಾ ಎಂಬ ಪತ್ರಕರ್ತರ ಪ್ರಶ್ನೆಗೆ ಅವರು ಮೇಲಿನಂತೆ ಉತ್ತರಿಸಿದರು.

ನಾನೂ ಟಿಕೆಟ್‌ ಆಕಾಂಕ್ಷಿ

ನಾನೂ ಸಹ ಚಿಕ್ಕಬಳ್ಳಾಪುರ ಲೋಕಸಭಾ ಚುನಾವಣೆಯ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದು ಹೈಕಮಾಂಡ್‌ಗೆ ಮನವಿ ಸಲ್ಲಿಸಿದ್ದೇನೆ ಸಕಾರಾತ್ಮಕವಾದ ರೀತಿಯಲ್ಲಿ ಪಕ್ಷದ ಮುಖಂಡರು ಸ್ಪಂದಿಸಿದ್ದಾರೆ, ಕ್ಷೇತ್ರದಲ್ಲಿ ಇರುವವರಿಗೆ ಮಾತ್ರ ಟಿಕೆಟ್ ನೀಡಬೇಕೆಂಬುದು ಜನರ ಅಭಿಪ್ರಾಯವಾಗಿದೆ. ನಾನು ಸಹ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಸಾಕಷ್ಟು ಪರಿಚಿತನಾಗಿದ್ದೇನೆ, ಶೇ.50ರಷ್ಟು ಜನ ನನಗೆ ಪರಿಚಯವಿದ್ದಾರೆ. ಜನರ ಹಿತದೃಷ್ಟಿಯಿಂದ ಅಭಿವೃದ್ಧಿ ಹಿತದೃಷ್ಟಿಯಿಂದ ನನಗೇ ನೀಡಬೇಕೆಂಬುದು ನನ್ನ ಆಶಯವಾಗಿದೆ.ಬಿಜೆಪಿ ಓಟಿಗಾಗಿ ಅಯೋಧ್ಯೆ ಪ್ರಕರಣ ಕೈಗೆತ್ತಿಕೊಂಡಿದೆ. ಐವತ್ತು ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದ ಬಿಜೆಪಿ ಪಕ್ಷವು ಅಯೋಧ್ಯೆ ಮತ್ತು ರಾಮ ಮಂದಿರದ ವಿಷಯವನ್ನು ಕೈಗೆತ್ತಿಕೊಂಡು ಅದನ್ನು ಮತ ಬ್ಯಾಂಕ್ ಆಗಿ ಪರಿವರ್ತಿಸಲು ಹೊರಟಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯವರು ಪುಲ್ವಾಮಾ ಪ್ರಕರಣವನ್ನು ತೆಗೆದುಕೊಂಡು ಗೆಲುವು ಸಾಧಿಸಿದರು, ಈಗ ಅಯೋಧ್ಯೆ ರಾಮನ ಜಪ ಮಾಡುತ್ತಿದ್ದಾರೆ ಎಂದರು.

ಈ ವೇಳೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಎನ್.ಕೇಶವ ರೆಡ್ಡಿ, ತಾಲ್ಲೂಕು ಕಾರ್ಯದರ್ಶಿ ವೆಂಕಟರಮಣ, ತೊಂಡೇಬಾವಿ ಅಶ್ವಥ್‌ನಾರಾಯಣಗೌಡ, ಮರಳೂರು ಹನುಮಂತರ ರೆಡ್ಡಿ, ಉದ್ಯಮಿ ಬಿ.ಆರ್. ಶ್ರೀನಿವಾಸಮೂರ್ತಿ, ಆರ್.ಪಿ. ಗೋಪಿನಾಥ್, ಆರ್.ಎ. ನಾಗರಾಜ್ ಮತ್ತಿತರರು ಇದ್ದರು.