ಕೆಪಿಸಿಸಿ ಅಧ್ಯಕ್ಷ ಹುದ್ದೆಗೆ ಹಿರಿಯ ನಾಯಕರಾದ ಸತೀಶ್‌ ಜಾರಕಿಹೊಳಿ ಹಾಗೂ ಬಿ.ಕೆ. ಹರಿಪ್ರಸಾದ್‌ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ ಎನ್ನಲಾಗಿದೆ.ಮೇಲ್ವರ್ಗಕ್ಕೆ ಮುಖ್ಯಮಂತ್ರಿ ಸ್ಥಾನ ಸಿಗುತ್ತಿರುವ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ಒಬಿಸಿ ವರ್ಗಕ್ಕೆ ನೀಡಲು ಕಾಂಗ್ರೆಸ್‌ ಬಯಸಿದೆ.

 ಬೆಂಗಳೂರು : ಕೆಪಿಸಿಸಿ ಅಧ್ಯಕ್ಷ ಹುದ್ದೆಗೆ ಹಿರಿಯ ನಾಯಕರಾದ ಸತೀಶ್‌ ಜಾರಕಿಹೊಳಿ ಹಾಗೂ ಬಿ.ಕೆ. ಹರಿಪ್ರಸಾದ್‌ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ ಎನ್ನಲಾಗಿದೆ.

ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ಒಬಿಸಿ ವರ್ಗಕ್ಕೆ ನೀಡಲು ಕಾಂಗ್ರೆಸ್‌ ಬಯಸಿದೆ

ಮೇಲ್ವರ್ಗಕ್ಕೆ ಮುಖ್ಯಮಂತ್ರಿ ಸ್ಥಾನ ಸಿಗುತ್ತಿರುವ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ಒಬಿಸಿ ವರ್ಗಕ್ಕೆ ನೀಡಲು ಕಾಂಗ್ರೆಸ್‌ ಬಯಸಿದೆ. ಹೀಗಾಗಿ ಆ ಹುದ್ದೆಯನ್ನು ಪಡೆಯಲು ಸತೀಶ್‌ ಜಾರಕಿಹೊಳಿ ಅವರು ತೀವ್ರ ಪೈಪೋಟಿ ನಡೆಸಿದ್ದಾರೆ. 

ನಿಷ್ಠೆಯಿಂದ ಇರುವ ನಾಯಕನಿಗೆ ಪಟ್ಟ ಕಟ್ಟುವ ಇರಾದೆ

ಆದರೆ ಪಕ್ಷಕ್ಕೆ ದೀರ್ಘಕಾಲದಿಂದ ನಿಷ್ಠೆಯಿಂದ ಇರುವ ನಾಯಕನಿಗೆ ಪಟ್ಟ ಕಟ್ಟುವ ಇರಾದೆ ಕಾಂಗ್ರೆಸ್‌ ವರಿಷ್ಠರಲ್ಲಿದೆ. ಆದ ಕಾರಣ ಹರಿಪ್ರಸಾದ್‌ ಹೆಸರನ್ನು ಕೆಲ ವರಿಷ್ಠ ನಾಯಕರು ಸೂಚಿಸಿದ್ದಾರೆ. ಹೀಗಾಗಿ ಜಾರಕಿಹೊಳಿ ಹಾಗೂ ಹರಿಪ್ರಸಾದ್‌ ಪೈಕಿ ಇಬ್ಬರಲ್ಲಿ ಒಬ್ಬರಿಗೆ ಹುದ್ದೆ ಒಲಿಯುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.