ದುಬಾರಿ ಆಟಾಟೋಪಕ್ಕೆ ಬ್ರೇಕ್‌: ಸಾರಿಗೆ ಇಲಾಖೆಯಿಂದ 98 ವಾಹಗಳು ಜಪ್ತಿ

| N/A | Published : Jul 01 2025, 01:48 AM IST / Updated: Jul 01 2025, 07:09 AM IST

ಸಾರಾಂಶ

ಬೈಕ್‌ ಟ್ಯಾಕ್ಸಿ ಸೇವೆ ಸ್ಥಗಿತದ ನಂತರ ದುಬಾರಿ ಪ್ರಯಾಣ ದರ ವಸೂಲಿ ಮಾಡುತ್ತಿರುವ ಆ್ಯಪ್‌ ಆಧಾರಿತ ಸೇವೆ ನೀಡುವ ಆಟೋ ಮತ್ತು ಇತರ ಆಟೋಗಳ ವಿರುದ್ಧ ಕ್ರಮಕ್ಕೆ ಮುಂದಾಗಿರುವ ಸಾರಿಗೆ ಇಲಾಖೆ, ಸೋಮವಾರ ನಗರದಲ್ಲಿ ತಪಾಸಣೆ ನಡೆಸಿ 98 ಆಟೋಗಳನ್ನು ಜಪ್ತಿ ಮಾಡಿದೆ.

 ಬೆಂಗಳೂರು :  ಬೈಕ್‌ ಟ್ಯಾಕ್ಸಿ ಸೇವೆ ಸ್ಥಗಿತದ ನಂತರ ದುಬಾರಿ ಪ್ರಯಾಣ ದರ ವಸೂಲಿ ಮಾಡುತ್ತಿರುವ ಆ್ಯಪ್‌ ಆಧಾರಿತ ಸೇವೆ ನೀಡುವ ಆಟೋ ಮತ್ತು ಇತರ ಆಟೋಗಳ ವಿರುದ್ಧ ಕ್ರಮಕ್ಕೆ ಮುಂದಾಗಿರುವ ಸಾರಿಗೆ ಇಲಾಖೆ, ಸೋಮವಾರ ನಗರದಲ್ಲಿ ತಪಾಸಣೆ ನಡೆಸಿ 98 ಆಟೋಗಳನ್ನು ಜಪ್ತಿ ಮಾಡಿದೆ.

ಪ್ರಯಾಣಿಕರಿಂದ ಬೇಕಾಬಿಟ್ಟಿಯಾಗಿ ಪ್ರಯಾಣ ದರ ವಸೂಲಿ ಮಾಡುತ್ತಿರುವ ಚಾಲಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸಾರಿಗೆ ಇಲಾಖೆ ಆಯುಕ್ತರಿಗೆ ಸೂಚನೆ ನೀಡಿದ್ದರು. ಅದರಂತೆ ಸೋಮವಾರ ನಗರದ 11 ಪ್ರಾದೇಶಿಕ ಸಾರಿಗೆ ಕಚೇರಿಗಳಿಂದ ತಲಾ 2ರಂತೆ ಒಟ್ಟು 22 ವಿಶೇಷ ತನಿಖಾ ತಂಡಗಳ ಮೂಲಕ ತಪಾಸಣೆ ನಡೆಸಲಾಗಿದೆ. ಈ ವೇಳೆ ದುಬಾರಿ ದರ ವಸೂಲಿ ಮಾಡುತ್ತಿದ್ದ ಮತ್ತು ಕಾನೂನು ಬಾಹಿರವಾಗಿ ಆಟೋ ಸೇವೆ ನೀಡುತ್ತಿದ್ದ 98 ಆಟೋಗಳನ್ನು ಜಪ್ತಿ ಮಾಡಲಾಗಿದೆ. ಅದರೊಂದಿಗೆ 260 ಆಟೋಗಳ ವಿರುದ್ಧ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲಾಗಿದೆ.

ಆಟೋ ತಪಾಸಣೆ ವಿವರ:

ಆರ್‌ಟಿಒದಾಖಲಾದ ಪ್ರಕರಣಜಪ್ತಿಯಾದ ಆಟೋಗಳ ಸಂಖ್ಯೆ

ಬೆಂಗಳೂರು ಕೇಂದ್ರ3019

ಬೆಂಗಳೂರು ಪಶ್ಚಿಮ3613

ಬೆಂಗಳೂರು ಪೂರ್ವ3005

ಬೆಂಗಳೂರು ಉತ್ತರ2503

ಬೆಂಗಳೂರು ದಕ್ಷಿಣ4818

ಜ್ಞಾನಭಾರತಿ1816

ಯಲಹಂಕ1105

ಎಲೆಕ್ಟ್ರಾನಿಕ್‌ ಸಿಟಿ2608

ಕೆಆರ್‌ ಪುರ1905

ಚಂದಾಪುರ1104

ದೇವನಹಳ್ಳಿ0602

ಒಟ್ಟು26098

Read more Articles on