ರಿಸರ್ವ್ ಬ್ಯಾಂಕ್ನ ನಿಯಮಾವಳಿಯ ಪ್ರಕಾರ ಫಿಕ್ಸ್ಡ್ ಡೆಪಾಸಿಟ್ನಲ್ಲಿ ಇಡಬಹುದಾದ ಕನಿಷ್ಠ ಮೊತ್ತ 1000 ರು.ನಿಂದ 10,000 ರು.ತನಕ ಇದೆ. ಆದರೆ ಗರಿಷ್ಠ ಮಿತಿ ಇಲ್ಲ. ಉಳಿದ ಹೂಡಿಕೆಗಳಿಗೆ ಹೋಲಿಸಿದರೆ ಎಫ್ಡಿಯಲ್ಲಿ ಹಣ ಇಡುವುದು ಸುರಕ್ಷಿತವೇನೋ ಹೌದು. ಆದರೆ ರಿಸ್ಕ್ ಇಲ್ಲದಿಲ್ಲ
ಆಡಿದ ಎಲ್ಲಾ ಪಂದ್ಯಗಳನ್ನು ಗೆದ್ದೆವು. ಇದು ಎಲ್ಲಕ್ಕಿಂತ ಮುಖ್ಯ. ಕೊನೆಯಲ್ಲಿ ನಮಗೆ ಟ್ರೋಫಿ ಸಿಗಲಿಲ್ಲ, ಟ್ರೋಫಿ ಕೊಡಲಿಲ್ಲ. ಇದನ್ನೆಲ್ಲಾ ಪಕ್ಕಕ್ಕಿಡೋಣ. ನಮ್ಮ ಗೆಲುವಿನಿಂದ ಇಡೀ ದೇಶ ಸಂಭ್ರಮಿಸುತ್ತಿದೆ. ನಾವು ಏಷ್ಯಾ ಚಾಂಪಿಯನ್ ಆಗಿದ್ದು ಕೋಟ್ಯಂತರ ಕ್ರಿಕೆಟ್ ಅಭಿಮಾನಿಗಳಿಗೆ ಖುಷಿ ನೀಡಿದೆ.
ನವರಾತ್ರಿ ಆಯುಧ ಪೂಜೆ ಮತ್ತು ವಿಜಯದಶಮಿ ಆಚರಣೆಗೆ ಸಿಲಿಕಾನ್ ಸಿಟಿ ಸಜ್ಜಾಗುತ್ತಿದ್ದು, ಮಾರುಕಟ್ಟೆಗಳಲ್ಲಿ ಹಬ್ಬದ ಖರೀದಿ ನಡೆಯಿತು. ಬುಧವಾರ ಗುರುವಾರ ಸರ್ಕಾರಿ ರಜೆ ಇರುವುದರಿಂದ ಕೆಲವು ಕಚೇರಿಗಳು, ವ್ಯಾಪಾರಿ ಮಳಿಗೆ, ಗೋದಾಮು, ಫ್ಯಾಕ್ಟರಿ, ವಾಹನಗಳಿಗೆ ಮಂಗಳವಾರವೇ ಆಯುಧ ಪೂಜೆ ನೆರವೇರಿಸಲಿವೆ.
ನಗರದ ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾನಿಲಯದ ಎರಡು ಮತ್ತು ಮೂರನೇ ಘಟಿಕೋತ್ಸವ ಅ.3 ರಂದು ನಡೆಯಲಿದ್ದು, ಹಿರಿಯ ಕಲಾವಿದೆ ಭಾರತಿ ವಿಷ್ಣುವರ್ಧನ್ ಸೇರಿ ಅನೇಕರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗುವುದು.
ಪ್ರತಿ ಬಾರಿ ಮಳೆಯಿಂದಾಗುವ ಅತಿವೃಷ್ಟಿ, ಮಳೆ ಕೊರತೆಯಿಂದ ಎದುರಾಗುವ ಅನಾವೃಷ್ಟಿ, ಭೀಮಾ ನದಿ ತೀರದ ಲಕ್ಷಾಂತರ ರೈತರು, ಜನತೆ ಕಣ್ಣೀರ ಕೋಡಿ ಹರಿಸುವಂತಾಗಿದೆ. ತಾವು ಲಕ್ಷಾಂತರ ಹಣ ಹೂಡಿ ಮಾಡುತ್ತಿರೋ ಬೇಸಾಯದ ಫಸಲು ಫಲ ಅತೀ ನೀರಿನಿಂದ, ನೀರಿನ ಕೊರತೆಯಿಂದಾಗಿ ಹಾಳಾಗೋದನ್ನು ಕಣ್ಣಾರೆ ಕಂಡು ಮರಗುತ್ತಾರೆ.
ಪ್ರಸಾದದ ವ್ಯವಸ್ಥೆ ಇದೆ. ಎಲ್ಲರೂ ಊಟ ಮಾಡಿಕೊಂಡು ಹೋಗಬೇಕು. ಹಾಗೇ ಹೋಗಬಾರದು ಎಂದು ಹೇಳಿದರು. ಶ್ರೀಗಳು ಹೀಗೆ ಹೇಳುತ್ತಿದ್ದಂತೆ, ಅಷ್ಟೊತ್ತಿನವರೆಗೂ ಕಾರ್ಯಕ್ರಮ ಕೇಳುತ್ತಿದ್ದವರೆಲ್ಲರೂ ಕಾರ್ಯಕ್ರಮವೆಲ್ಲ ಮುಗಿತು ಅಂತ ಅದ್ಕೊಂಡ್ರೋ? ಏನೋ? ಎದ್ದು ಊಟಕ್ಕೆ ಹೊರಟು ನಿಂತರು.
ಒಣಗಿದ ಬರಪೀಡಿತ ಪ್ರದೇಶದಲ್ಲಿ ಜಲಕ್ರಾಂತಿ. ಗುಟ್ಟಹಳ್ಳಿಯಲ್ಲಿ ಬತ್ತಿ ಹೋಗಿದ್ದ ನೀರು ಮತ್ತೆ ಹರಿಯಲಾರಂಭಿಸಿದೆ. ಆ ಪ್ರದೇಶದಲ್ಲಿ ಮತ್ತೆ ಜೀವಕಳೆ ತುಂಬಿದೆ. ಗುರುದೇವ್ ಶ್ರೀ ಶ್ರೀ ರವಿ ಶಂಕರ ಅವರಿಂದ ಈ ಭಾಗದ ಜನರ ನೀರಿನ ಅಭಾವ ದೂರ
ʻದುರ್ಗಾಪೂಜೆಯ ಸಂದರ್ಭದ ಕೋಲ್ಕತ್ತಾದ ನಿಜ ಸ್ವರೂಪವನ್ನು ಕಾಣಬೇಕೆಂದಿದ್ದರೆ ನೀವು ರಾತ್ರಿ ಒಂಭತ್ತರ ಈ ಹೊತ್ತಿನಲ್ಲೇ ಬೀದಿಗಿಳಿಯಬೇಕುʼ ಎಂದು ಪರಿಚಿತ ಬಿಶ್ವಜಿತ್ ಮೊದಲೇ ಹೇಳಿದ್ದ. ಆತ ಹೇಳಿದ್ದು ಅನುಭವದ ಮಾತು ಎಂದು ನಾವು ಹಿಂತಿರುಗಿದಾಗ ಪೂರ್ತಿಯಾಗಿ ಅರ್ಥವಾಗಿ ಬಿಟ್ಟಿತ್ತು
ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳ ಬಗ್ಗೆ ಸಮೀಕ್ಷಾ ಕಾರ್ಯ ಕೈಗೊಳ್ಳಲು ನಿರಾಸಕ್ತಿ ತೋರಿದ ಇಬ್ಬರು ಶಿಕ್ಷಕರೂ ಸೇರಿದಂತೆ ಮೂವರು ಸಿಬ್ಬಂದಿಯನ್ನು ಜಿಲ್ಲಾ ಶಿಸ್ತು ಪ್ರಾಧಿಕಾರಿಗಳೂ ಆದ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಸೇವೆಯಿಂದ ಅಮಾನತುಗೊಳಿಸಿದ್ದಾರೆ.