ರಾಜಾಜಿನಗರ ಸುತ್ತಮುತ್ತ ಇಂದು ವಿದ್ಯುತ್‌ ವ್ಯತ್ಯಯ

| N/A | Published : Aug 25 2025, 02:00 AM IST / Updated: Aug 25 2025, 07:44 AM IST

Electricity

ಸಾರಾಂಶ

ಬೆಸ್ಕಾಂ ವ್ಯಾಪ್ತಿಯ ರಾಜಾಜಿನಗರ ಎನ್‌ಆರ್‌ಎಸ್ ಹಾಗೂ ಕೆ.ವಿ. ಟೆಲಿಕಾಂ ಬಡಾವಣೆ ವಿದ್ಯುತ್‌ ಉಪ ಕೇಂದ್ರಗಳಲ್ಲಿ ತ್ರೈಮಾಸಿಕ ನಿರ್ವಹಣೆ ಕೈಗೆತ್ತಿಕೊಂಡಿರುವ ಹಿನ್ನೆಲೆಯಲ್ಲಿ ಸೋಮವಾರ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆವರೆಗೆ ರಾಜಾಜಿನಗರ, ವಿಜಯನಗರ ಸುತ್ತಮುತ್ತ ವಿದ್ಯುತ್‌ ವ್ಯತ್ಯಯ ಆಗಲಿದೆ.

 ಬೆಂಗಳೂರು :  ಬೆಸ್ಕಾಂ ವ್ಯಾಪ್ತಿಯ ರಾಜಾಜಿನಗರ ಎನ್‌ಆರ್‌ಎಸ್ ಹಾಗೂ ಕೆ.ವಿ. ಟೆಲಿಕಾಂ ಬಡಾವಣೆ ವಿದ್ಯುತ್‌ ಉಪ ಕೇಂದ್ರಗಳಲ್ಲಿ ತ್ರೈಮಾಸಿಕ ನಿರ್ವಹಣೆ ಕೈಗೆತ್ತಿಕೊಂಡಿರುವ ಹಿನ್ನೆಲೆಯಲ್ಲಿ ಸೋಮವಾರ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆವರೆಗೆ ರಾಜಾಜಿನಗರ, ವಿಜಯನಗರ ಸುತ್ತಮುತ್ತ ವಿದ್ಯುತ್‌ ವ್ಯತ್ಯಯ ಆಗಲಿದೆ.

ರಾಜಾಜಿನಗರದ ಎನ್‌ಆರ್‌ಎಸ್‌ 220/66/11 ಕೆ.ವಿ. ಸಾಮರ್ಥ್ಯದ ಕೇಂದ್ರದ ನಿರ್ವಹಣೆ ಹಿನ್ನೆಲೆಯಲ್ಲಿ ರಾಜಾಜಿನಗರ 1 ರಿಂದ 6ನೇ ಬ್ಲಾಕ್‌ವರೆಗೆ ಮತ್ತು ಸುತ್ತಮುತ್ತಲಿನ ಪ್ರದೇಶ, ಗುಬ್ಬಣ್ಣ ಕೈಗಾರಿಕಾ ಪ್ರದೇಶ, ಡಾ.ಮೋದಿ ಆಸ್ಪತ್ರೆ ರಸ್ತೆ, ಮಂಜುನಾಥನಗರ, ಶಿವನಗರ, ಅಗ್ರಹಾರ ದಾಸರಹಳ್ಳಿ, ವೆಸ್ಟ್‌ ಆಫ್‌ ಕಾರ್ಡ್‌ ರಸ್ತೆಯ 1ರಿಂದ 5ನೇ ಕ್ರಾಸ್‌, ಮಹಾಗಣಪತಿನಗರ, ಕೆಎಚ್‌ಬಿ ಕಾಲೋನಿ 2ನೇ ಹಂತ, ಪಲಾಡಿಯಂ ವಸತಿ ಸಮುಚ್ಛಯ, ದೇವಯ್ಯ ಪಾರ್ಕ್, ನಾಗಪ್ಪ ಬ್ಲಾಕ್‌, ಪ್ರಕಾಶನಗರ, ಲಸ್ಕ್‌ ರಸ್ತೆ, ಸುಬ್ರಮಣ್ಯನಗರ, ಎಲ್‌ಎನ್‌ ಪುರ, ರಾಜ್‌ಕುಮಾರ್‌ ರಸ್ತೆ, ದಯಾನಂದನಗರ, ಸಾಯಿಮಂದಿರ, ಹರಿಶ್ಚಂದ್ರ ಘಾಟ್, ಮಾರುತಿ ಎಕ್ಸ್‌ಟೆನ್ಷನ್‌, ರಾಜಾಜಿನಗರ, ಬ್ರಿಗೇಟ್‌ ಗೇಟ್‌ ವೇ, ಪ್ಯಾಲೆಸ್‌ ಗುಟ್ಟಹಳ್ಳಿ, ಮುನೇಶ್ವರ ಬ್ಲಾಕ್‌, ಮಲ್ಲೇಶ್ವರ ಈಜುಕೊಳ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್‌ ವ್ಯತ್ಯಯ ಆಗಲಿದೆ ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.

66/11 ಕೆ.ವಿ. ಟೆಲಿಕಾಂ ಲೇಔಟ್

ಕೆವಿ ಟೆಲಿಕಾಂ ಲೇಔಟ್‌ ಕೇಂದ್ರದ ನಿರ್ವಹಣೆ ಹಿನ್ನೆಲೆ ವೆಸ್ಟ್‌ ಆಫ್‌ ಕಾರ್ಡ್‌ ರಸ್ತೆ, ಎಂಸಿ ಲೇಔಟ್‌, ವಿಜಯನಗರ ವಾಟರ್‌ಟ್ಯಾಂಕ್‌, ಹೊಸಹಳ್ಳಿ ಮುಖ್ಯರಸ್ತೆ, ಹಂಪಿನಗರ, ಮಾಗಡಿ ಮುಖ್ಯರಸ್ತೆ, ಬಿನ್ನಿಪೇಟೆ, ಜಗಜೀವನರಾಂ ನಗರ, ಗೋಪಾಲಪುರ, ಹೊಸಹಳ್ಳಿ, ಹಳೇಗುಡ್ಡದಹಳ್ಳಿ, ಭುವನೇಶ್ವರಿನಗರ, ಗೋರಿಪಾಳ್ಯ, ವಿ.ಎಸ್‌. ಗಾರ್ಡನ್‌, ಗೂಡ್ಸ್‌ ಶೆಡ್ಸ್‌ ರಸ್ತೆ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ವ್ಯತ್ಯಯ ಉಂಟಾಗಲಿದೆ.

Read more Articles on