ಬ್ಯಾಡ್ಮಿಂಟನ್‌ ಜಗತ್ತನ್ನು ಬೆರಗಾಗಿಸಿದ ಅನ್ಮೋಲ್‌!

| Published : Feb 19 2024, 01:35 AM IST / Updated: Feb 19 2024, 03:23 PM IST

ಅನ್ಮೋಲ್‌

ಸಾರಾಂಶ

17 ವರ್ಷದ ಅನ್ಮೋಲ್‌ ಖಾರ್ಬ್‌ ಕಳೆದ ಡಿಸೆಂಬರ್‌ನಲ್ಲಷ್ಟೇ ರಾಷ್ಟ್ರೀಯ ಚಾಂಪಿಯನ್‌ ಆಗಿ ಹೊರಹೊಮ್ಮಿದ್ದ ಪ್ರತಿಭೆ. ಏಷ್ಯಾ ಬ್ಯಾಡ್ಮಿಂಟನ್‌ ಟೀಂ ಚಾಂಪಿಯನ್‌ಶಿಪ್‌ಗೂ ಮುನ್ನ ಭಾರತ ಪರ ಯಾವುದೇ ಅಂ.ರಾ. ಟೂರ್ನಿಯಲ್ಲಿ ಆಡಿರಲಿಲ್ಲ.

ಬೆಂಗಳೂರು: 17 ವರ್ಷದ ಅನ್ಮೋಲ್‌ ಖಾರ್ಬ್‌ ಕಳೆದ ಡಿಸೆಂಬರ್‌ನಲ್ಲಷ್ಟೇ ರಾಷ್ಟ್ರೀಯ ಚಾಂಪಿಯನ್‌ ಆಗಿ ಹೊರಹೊಮ್ಮಿದ್ದ ಪ್ರತಿಭೆ. ಏಷ್ಯಾ ಬ್ಯಾಡ್ಮಿಂಟನ್‌ ಟೀಂ ಚಾಂಪಿಯನ್‌ಶಿಪ್‌ಗೂ ಮುನ್ನ ಭಾರತ ಪರ ಯಾವುದೇ ಅಂ.ರಾ. ಟೂರ್ನಿಯಲ್ಲಿ ಆಡಿರಲಿಲ್ಲ. 

ಭಾರತ ಚಾಂಪಿಯನ್‌ ಆಗುವಲ್ಲಿ ಅನ್ಮೋಲ್‌ ಕೊಡುಗೆ ಅಪಾರ. ನಾಕೌಟ್‌ ಹಂತದ ಮೂರೂ ಪಂದ್ಯಗಳಲ್ಲಿ ನಿರ್ಣಾಯಕ ಮುಖಾಮುಖಿಯಲ್ಲಿ ಗೆದ್ದು ಭಾರತಕ್ಕೆ ಆಸರೆಯಾದವರು ಅನ್ಮೋಲ್‌.

ಕ್ವಾರ್ಟರ್‌ ಫೈನಲ್‌ನಲ್ಲಿ ಭಾರತ ಹಾಗೂ ಚೀನಾ 2-2ರಲ್ಲಿ ಸಮಬಲ ಸಾಧಿಸಿದ್ದಾಗ ಕೊನೆಯ ಸಿಂಗಲ್ಸ್‌ ಪಂದ್ಯದಲ್ಲಿ ವಿಶ್ವ ನಂ.149 ವು ವಿರುದ್ಧ ಗೆದ್ದ ಅನ್ಮೋಲ್‌, ಜಪಾನ್‌ ವಿರುದ್ಧ ಸೆಮೀಸ್‌ನಲ್ಲಿ 2-2ರಲ್ಲಿ ಪಂದ್ಯ ಸಮಗೊಂಡಿದ್ದಾಗ ಮಾಜಿ ವಿಶ್ವ ನಂ.28 ನಟ್ಸುಕಿ ವಿರುದ್ಧ ಗೆಲುವು ಸಾಧಿಸಿದರು. ಭಾರತ ಹಾಗೂ ಥಾಯ್ಲೆಂಡ್‌ ನಡುವಿನ ಫೈನಲ್‌ 2-2ರಲ್ಲಿ ಸಮಗೊಂಡಿದ್ದಾಗ ವಿಶ್ವ ನಂ.45 ಪೊರ್ನ್‌ಪಿಚಾರನ್ನು ಸುಲಭವಾಗಿ ಬಗ್ಗುಬಡಿದ ಅನ್ಮೋಲ್‌, ಬ್ಯಾಡ್ಮಿಂಟನ್‌ ಲೋಕವನ್ನು ಬೆರಗಾಗಿಸಿ ಭವಿಷ್ಯದ ತಾರೆ ಎನಿಸಿದರು.