ಫೆ.23ಕ್ಕೆ ಬೆಂಗಳೂರಿನಲ್ಲಿ ಡಬ್ಲ್ಯುಪಿಎಲ್‌ನ ಅದ್ಧೂರಿ ಉದ್ಘಾಟನಾ ಸಮಾರಂಭ

| Published : Feb 20 2024, 01:47 AM IST

ಫೆ.23ಕ್ಕೆ ಬೆಂಗಳೂರಿನಲ್ಲಿ ಡಬ್ಲ್ಯುಪಿಎಲ್‌ನ ಅದ್ಧೂರಿ ಉದ್ಘಾಟನಾ ಸಮಾರಂಭ
Share this Article
  • FB
  • TW
  • Linkdin
  • Email

ಸಾರಾಂಶ

2ನೇ ಆವೃತ್ತಿ ವುಮೆನ್ಸ್‌ ಪ್ರೀಮಿಯರ್‌ ಲೀಗ್‌(ಡಬ್ಲ್ಯುಪಿಎಲ್‌) ಫೆ.23ರಂದು ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರಂಭಗೊಳ್ಳಲಿದ್ದು, ಅದೇ ದಿನ ಸಂಜೆ ಅದ್ಧೂರಿ ಉದ್ಘಾಟನಾ ಸಮಾರಂಭ ನಡೆಯಲಿದೆ.

ಬೆಂಗಳೂರು: 2ನೇ ಆವೃತ್ತಿ ವುಮೆನ್ಸ್‌ ಪ್ರೀಮಿಯರ್‌ ಲೀಗ್‌(ಡಬ್ಲ್ಯುಪಿಎಲ್‌) ಫೆ.23ರಂದು ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರಂಭಗೊಳ್ಳಲಿದ್ದು, ಅದೇ ದಿನ ಸಂಜೆ ಅದ್ಧೂರಿ ಉದ್ಘಾಟನಾ ಸಮಾರಂಭ ನಡೆಸಲು ಬಿಸಿಸಿಐ ನಿರ್ಧರಿಸಿದೆ. ಸಂಜೆ 6.30ಕ್ಕೆ ಕಾರ್ಯಕ್ರಮ ಆರಂಭಗೊಳ್ಳಲಿದ್ದು, ಬಾಲಿವುಟ್‌ ನಟ ಆರ್ಯನ್‌ ಕಾರ್ತಿಕ್‌ ಪ್ರದರ್ಶನ ನೀಡಲಿದ್ದಾರೆ. ಇತರ ಕಲಾವಿದರು, ಸಂಗೀತ ನಿರ್ದೇಶಕರು ಕೂಡಾ ಸಮಾರಂಭದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಉದ್ಘಾಟನಾ ಪಂದ್ಯದಲ್ಲಿ ಮುಂಬೈ-ಡೆಲ್ಲಿ ತಂಡಗಳು ಮುಖಾಮುಖಿಯಾಗಲಿವೆ.

ಐಪಿಎಲ್‌: ಕೋಲ್ಕತಾಕ್ಕೆಆಟ್ಕಿನ್ಸನ್‌ ಬದಲು ಚಮೀರನವದೆಹಲಿ: ಐಪಿಎಲ್‌ನ ಮುಂಬರುವ ಆವೃತ್ತಿಗೆ ಕೋಲ್ಕತಾ ತಂಡದಿಂದ ಇಂಗ್ಲೆಂಡ್‌ ವೇಗಿ ಗಸ್‌ ಆಟ್ಕಿನ್ಸನ್‌ ಹೊರಬಿದ್ದಿ ದ್ದಾರೆ. ಶ್ರೀಲಂಕಾದ ದುಶ್ಮಂತ ಚಮೀರ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ. 50 ಲಕ್ಷ ರು. ನೀಡಿ ಚಮೀರ ಅವರನ್ನು ತಂಡಕ್ಕೆ ಸೇರಿಸಲಾಗಿದೆ ಎಂದು ಕೆಕೆಆರ್‌ ತಿಳಿಸಿದೆ. ಇದೇ ವೇಳೆ ಫೆ.23ರಿಂದ ಆರಂಭಗೊಳ್ಳಲಿರುವ ವುಮೆನ್ಸ್‌ ಪ್ರೀಮಿಯರ್‌ ಲೀಗ್‌(ಡಬ್ಲ್ಯುಪಿಎಲ್‌)ನಿಂದ ಕೆಲ ಆಟಗಾರ್ತಿಯರು ಹೊರಬಿದ್ದಿದ್ದಾರೆ. ಗಾಯದ ಸಮಸ್ಯೆಯಿಂದ ಆರ್‌ಸಿಬಿಯ ಕನಿಕಾ ಅಹುಜಾ ಹೊರಬಿದ್ದಿದ್ದು, ಮಹಾರಾಷ್ಟ್ರದ ಶ್ರದ್ಧಾ ತಂಡ ಕೂಡಿಕೊಂಡಿದ್ದಾರೆ. ಬರೋಬ್ಬರಿ ₹2 ಕೋಟಿಗೆ ಗುಜರಾತ್‌ಗೆ ಬಿಕರಿಯಾಗಿದ್ದ ಉದಯೋನ್ಮುಖ ಆಟಗಾರ್ತಿ ಕಾಶ್ವಿ ಗೌತಮ್‌ ಟೂರ್ನಿಗೆ ಅಲಭ್ಯರಾಗಲಿದ್ದಾರೆ.