ರಣಜಿ ಟ್ರೋಫಿ: ಗರಿಷ್ಠ ರನ್‌ ಚೇಸ್‌ ದಾಖಲೆ ನಿರ್ಮಿಸಿದ ರೈಲ್ವೇಸ್‌

| Published : Feb 20 2024, 01:46 AM IST

ರಣಜಿ ಟ್ರೋಫಿ: ಗರಿಷ್ಠ ರನ್‌ ಚೇಸ್‌ ದಾಖಲೆ ನಿರ್ಮಿಸಿದ ರೈಲ್ವೇಸ್‌
Share this Article
  • FB
  • TW
  • Linkdin
  • Email

ಸಾರಾಂಶ

ರಣಜಿ ಟ್ರೋಫಿ ಇತಿಹಾಸದಲ್ಲೇ ಗರಿಷ್ಠ ರನ್‌ ಬೆನ್ನತ್ತಿ ಗೆದ್ದ ದಾಖಲೆನ್ನು ರೈಲ್ವೇಸ್‌ ತಂಡ ತನ್ನ ಹೆಸರಿಗೆ ಬರೆದುಕೊಂಡಿದೆ.

ಅಗರ್ತಾಲಾ: ರಣಜಿ ಟ್ರೋಫಿ ಇತಿಹಾಸದಲ್ಲೇ ಗರಿಷ್ಠ ರನ್‌ ಬೆನ್ನತ್ತಿ ಗೆದ್ದ ದಾಖಲೆನ್ನು ರೈಲ್ವೇಸ್‌ ತಂಡ ತನ್ನ ಹೆಸರಿಗೆ ಬರೆದುಕೊಂಡಿದೆ.ಸೋಮವಾರ ತ್ರಿಪುರ ವಿರುದ್ಧದ ಲೀಗ್‌ ಹಂತದ ಅಂತಿಮ ಪಂದ್ಯದಲ್ಲಿ ರೈಲ್ವೇಸ್‌ 378 ರನ್‌ಗಳ ಗುರಿ ಬೆನ್ನಟ್ಟಿ ಗೆದ್ದು ಹೊಸ ದಾಖಲೆ ಬರೆಯಿತು. 2019-20ರಲ್ಲಿ ಉತ್ತರಪ್ರದೇಶ ವಿರುದ್ಧ ಸೌರಾಷ್ಟ್ರ ತಂಡ 372 ರನ್‌ ಗುರಿಯನ್ನು ಯಶಸ್ವಿಯಾಗಿ ಬೆನ್ನತ್ತಿದ್ದು ಈ ವರೆಗಿನ ದಾಖಲೆಯಾಗಿತ್ತು.ಮೊದಲ ಇನ್ನಿಂಗ್ಸ್‌ನಲ್ಲಿ 149 ರನ್‌ಗಳ ಅಲ್ಪ ಮೊತ್ತಕ್ಕೆ ಆಲೌಟಾಗಿದ್ದ ತ್ರಿಪುರಾ, ಕೇವಲ 105 ರನ್‌ಗೆ ರೈಲ್ವೇಸ್‌ಅನ್ನು ಕಟ್ಟಿಹಾಕಿ 44 ರನ್‌ಗಳ ಮುನ್ನಡೆ ಸಾಧಿಸಿತ್ತು. 2ನೇ ಇನ್ನಿಂಗ್ಸ್‌ನಲ್ಲಿ 333 ರನ್‌ ಗಳಿಸಿದ ತ್ರಿಪುರಾ ತಂಡ ರೈಲ್ವೇಸ್‌ ಗೆಲುವಿಗೆ 378 ರನ್‌ ಗುರಿ ನೀಡಿತ್ತು. ಅಜೇಯ 169 ರನ್‌ ಸಿಡಿಸಿ ಕೊನೆವರೆಗೂ ಕ್ರೀಸ್‌ನಲ್ಲಿದ್ದ ಪ್ರಥಮ್‌ ಸಿಂಗ್‌ ಹಾಗೂ 106 ಚಚ್ಚಿದ ಮೊಹಮದ್‌ ಸೈಫ್‌ ರೈಲ್ವೇಸ್‌ ಗೆಲುವಿಗೆ ಮಹತ್ವದ ಕಾಣಿಕೆ ನೀಡಿದರು.ರನ್‌ ಚೇಸ್‌ ಮಾಡಿ ಗೆದ್ದತಂಡ 378/5 ರೈಲ್ವೇಸ್‌ VS ತ್ರಿಪುರಾ372/4 ಸೌರಾಷ್ಟ್ರVS ಉತ್ತರಪ್ರದೇಶ371/4 ಅಸ್ಸಾಂ VS ಸರ್ವೀಸಸ್‌360/4 ರಾಜಸ್ತಾನ VS ವಿದರ್ಭ359/4 ಉತ್ತರಪ್ರದೇಶ VS ಮಹಾರಾಷ್ಟ್ರ