ಸಾರಾಂಶ
ನವದೆಹಲಿ: ಶುಕ್ರವಾರ ರಾತ್ರಿ ಕತಾರ್‌ನ ದೋಹಾದಲ್ಲಿ ನಡೆದ ಡೈಮಂಡ್ ಲೀಗ್ ಅಥ್ಲೆಟಿಕ್ಸ್‌ನ ಜಾವೆಲಿನ್ ಥ್ರೋನಲ್ಲಿ 90.23 ಮೀ. ದೂರಕ್ಕೆ ಎಸೆದು ರಾಷ್ಟ್ರೀಯ ದಾಖಲೆ ಬರೆದ ಭಾರತದ ತಾರಾ ಅಥ್ಲೀಟ್ ನೀರಜ್ ಚೋಪ್ರಾರನ್ನು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ. ನೀರಜ್‌ರ ಸಾಧನೆಯನ್ನು ಕೊಂಡಾಡಿರುವ ಪ್ರಧಾನಿ, ‘ವೃತ್ತಿಬದುಕಿನಲ್ಲಿ ಮೊದಲ ಬಾರಿಗೆ 90 ಮೀ. ದಾಟಿದ ನಿಮಗೆ ಅಭಿನಂದನೆಗಳು. ಇದು ನಿಮ್ಮ ಸತತ ಪರಿಶ್ರಮ, ಛಲಕ್ಕೆ ಸಿಕ್ಕಿರುವ ಫಲಿತಾಂಶ. ನಿಮ್ಮ ಈ ಪ್ರದರ್ಶನದಿಂದ ಇಡೀ ಭಾರತಕ್ಕೆ ಖುಷಿ ಹಾಗೂ ಹೆಮ್ಮೆ ತಂದಿದೆ’ ಎಂದು ಟ್ವೀಟ್ ಮಾಡಿದ್ದಾರೆ.
ನೀರಜ್ 90.23 ಮೀ.ನೊಂದಿಗೆ 2ನೇ ಸ್ಥಾನ ಪಡೆದರೆ, ಜರ್ಮಿನಿಯ ಯೂಲಿಯನ್ ವೆಬ್ಬರ್ 91.03 ಮೀ. ಎಸೆದು ಮೊದಲ ಸ್ಥಾನ ಪಡೆದರು. ಇನ್ನಷ್ಟು ದೂರಕ್ಕೆ ಎಸೆಯಲು
ಸ್ಫೂರ್ತಿ: ನೀರಜ್ ಚೋಪ್ರಾ
90 ಮೀ. ದೂರಕ್ಕೆ ಜಾವೆಲಿನ್ ಎಸೆದ ಭಾರತದ ಮೊದಲ ಅಥ್ಲೀಟ್ ಎನ್ನುವ ದಾಖಲೆ ಬರೆದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನೀರಜ್, ‘90 ಮೀ. ದಾಟಿದ್ದು ಬಹಳ ಖುಷಿ ನೀಡಿದೆ. ಈ ಪ್ರದರ್ಶನ ನನಗೆ ಇನ್ನಷ್ಟು ದೂರಕ್ಕೆ ಎಸೆಯಲು ಸ್ಫೂರ್ತಿ ನೀಡಲಿದೆ. ನನ್ನ ಕೋಚ್ ಜಾನ್ ಜೆಲೆನ್ಜಿ ಅವರಿಂದ ಸಾಕಷ್ಟು ವಿಚಾರಗಳನ್ನು ಕಲಿಯುತ್ತಿದ್ದೇನೆ. ಕಳೆದ ಕೆಲ ವರ್ಷ ನಾನು ಸಣ್ಣ ಪ್ರಮಾಣದ ಗಾಯದಿಂದ ಬಳಲುತ್ತಿದ್ದೆ. ಅದರಿಂದಾಗಿ ನಿರೀಕ್ಷಿತ ಪ್ರದರ್ಶನ ಮೂಡಿಬರುತ್ತಿರಲಿಲ್ಲ. ಈಗ ಗಾಯದ ಸಮಸ್ಯೆ ಇಲ್ಲ’ ಎಂದು ನೀರಜ್ ಹೇಳಿದರು.