ರಾಷ್ಟ್ರೀಯ ಮಟ್ಟದಲ್ಲಿ ಪದಕ ಸಾಧನೆ ಮಾಡಿದ ಕರ್ನಾಟಕದ ಬಾಸ್ಕೆಟ್‌ಬಾಲ್‌ ಪಟುಗಳಿಗೆ ರಾಜ್ಯ ಬಾಸ್ಕೆಟ್‌ಬಾಲ್‌ ಸಂಸ್ಥೆ (ಕೆಎಸ್‌ಬಿಬಿಎ) ವತಿಯಿಂದ ಸನ್ಮಾನ ಮಾಡಿ, ನಗದು ಬಹುಮಾನ ಹಸ್ತಾಂತರಿಸಲಾಯಿತು.

 ಬೆಂಗಳೂರು : ರಾಷ್ಟ್ರೀಯ ಮಟ್ಟದಲ್ಲಿ ಪದಕ ಸಾಧನೆ ಮಾಡಿದ ಕರ್ನಾಟಕದ ಬಾಸ್ಕೆಟ್‌ಬಾಲ್‌ ಪಟುಗಳಿಗೆ ರಾಜ್ಯ ಬಾಸ್ಕೆಟ್‌ಬಾಲ್‌ ಸಂಸ್ಥೆ (ಕೆಎಸ್‌ಬಿಬಿಎ) ವತಿಯಿಂದ ಸನ್ಮಾನ ಮಾಡಿ, ನಗದು ಬಹುಮಾನ ಹಸ್ತಾಂತರಿಸಲಾಯಿತು.

ಶನಿವಾರ ನಗರದ ಕಂಠೀರವ ಬಾಸ್ಕೆಟ್‌ಬಾಲ್‌ ಕ್ರೀಡಾಂಗಣದಲ್ಲಿ ಸಮಾರಂಭ ನೆರವೇರಿತು. 39ನೇ ರಾಷ್ಟ್ರೀಯ ಬಾಸ್ಕೆಟ್‌ಬಾಲ್‌ ಕೂಟದಲ್ಲಿ ಚಿನ್ನ ಗೆದ್ದ ಬಾಲಕಿಯರ ತಂಡಕ್ಕೆ ₹7.5 ಲಕ್ಷ, ಬೆಳ್ಳಿ ಪದಕ ಗೆದ್ದ ಬಾಲಕರ ತಂಡಕ್ಕೆ ₹5 ಲಕ್ಷ ಹಾಗೂ 74ನೇ ರಾಷ್ಟ್ರೀಯ ಚಾಂಪಿಯನ್‌ಶಿಪ್‌ನಲ್ಲಿ 4ನೇ ಸ್ಥಾನ ಪಡೆದ ರಾಜ್ಯ ಪುರುಷರ ತಂಡಕ್ಕೆ ₹2 ಲಕ್ಷ ನಗದು ಹಸ್ತಾಂತರಿಸಲಾಯಿತು. 

ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ, ರಾಜ್ಯ ಒಲಿಂಪಿಕ್‌ ಸಂಸ್ಥೆ ಅಧ್ಯಕ್ಷ ಡಾ.ಕೆ.ಗೋವಿಂದರಾಜು, ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್‌, ಖ್ಯಾತ ನಟಿ ಅನು ಪ್ರಭಾಕರ್‌, ಕೆಎಸ್‌ಬಿಬಿಎ ಅಧ್ಯಕ್ಷ, ಬೆಂಗಳೂರು ನಗರ ಪೊಲೀಸ್‌ ಆಯುಕ್ತ ಬಿ.ದಯಾನಂದ ಸೇರಿ ಹಲವು ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

ರೈಲ್ವೇ ತಂಡ ಮಾತೃ ಕಪ್‌ ಚಾಂಪಿಯನ್‌

ರಾಜ್ಯ ಬಾಸ್ಕೆಟ್‌ಬಾಲ್‌ ಸಂಸ್ಥೆ ಆಯೋಜಿಸಿದ ಮಹಿಳೆಯರ ಮಾತೃ ಕಪ್‌ ಟೂರ್ನಿಯ ಫೈನಲ್‌ನಲ್ಲಿ ಬೀಗಲ್ಸ್‌ ತಂಡವನ್ನು ಸೋಲಿಸಿದ ಸೌತ್‌ ವೆಸ್ಟರ್ನ್‌ ರೈಲ್ವೇ ತಂಡ ಚಾಂಪಿಯನ್‌ ಆಗಿ ಹೊರಹೊಮ್ಮಿತು. ಚಾಂಪಿಯನ್‌ ತಂಡಕ್ಕೆ ₹75000, ರನ್ನರ್‌ ಅಪ್‌ ತಂಡಕ್ಕೆ ₹50000 ನಗದು ಬಹುಮಾನ ಲಭಿಸಿತು.