ಸಾರಾಂಶ
ಬುಲವಾಯೊ: ನ್ಯೂಜಿಲೆಂಡ್ ತಂಡ ಟೆಸ್ಟ್ ಇತಿಹಾಸದಲ್ಲೇ ತನ್ನ ಅತಿದೊಡ್ಡ ಹಾಗೂ ಒಟ್ಟಾರೆ ತಂಡಗಳ ಪೈಕಿ 3ನೇ ಅತಿ ದೊಡ್ಡ ಗೆಲುವು ಸಾಧಿಸಿದೆ. ಶನಿವಾರ ಜಿಂಬಾಬ್ವೆ ವಿರುದ್ಧ 2ನೇ ಟೆಸ್ಟ್‌ನಲ್ಲಿ ಪ್ರವಾಸಿ ಕಿವೀಸ್ ತಂಡ ಇನ್ನಿಂಗ್ಸ್ ಹಾಗೂ 359 ರನ್ ಬೃಹತ್ ಜಯಗಳಿಸಿತು. ಇದರೊಂದಿಗೆ 2 ಪಂದ್ಯಗಳ ಸರಣಿಯನ್ನು 2-0 ಅಂತರದಲ್ಲಿ ಕೈವಶಪಡಿಸಿಕೊಂಡಿತು.
ಜಿಂಬಾಬ್ವೆ ಮೊದಲ ಇನ್ನಿಂಗ್ಸ್‌ನಲ್ಲಿ 125ಕ್ಕೆ ಆಲೌಟಾಗಿದ್ದರೆ, ಕಿವೀಸ್ 3 ವಿಕೆಟ್‌ಗೆ 601 ರನ್ ಸಿಡಿಸಿ ಡಿಕ್ಲೇರ್ ಘೋಷಿಸಿತು. ತಂಡ ಶನಿವಾರ ಬ್ಯಾಟಿಂಗ್‌ಗೆ ಆಗಮಿಸಲಿಲ್ಲ. 476 ರನ್‌ಗಳ ಭಾರೀ ಹಿನ್ನಡೆಯೊಂದಿಗೆ 2ನೇ ಇನ್ನಿಂಗ್ಸ್ ಆರಂಭಿಸಿದ ಜಿಂಬಾಬ್ವೆ 117 ರನ್‌ಗೆ ಆಲೌಟಾಯಿತು. ಜಾಕರಿ ಫೌಲ್ಕೆಸ್ 5 ವಿಕೆಟ್ ಕಿತ್ತರು. ಟೆಸ್ಟ್‌ನಲ್ಲಿ ಇನ್ನಿಂಗ್ಸ್ ಅಂತರದ ಅತಿ ದೊಡ್ಡ ಗೆಲುವು ಸಾಧಿಸಿದ್ದು ಇಂಗ್ಲೆಂಡ್. 1938ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಇನ್ನಿಂಗ್ಸ್ ಹಾಗೂ 579 ರನ್‌ಗಳಲ್ಲಿ ಗೆದ್ದಿತ್ತು. 2002ರಲ್ಲಿ ದ.ಆಫ್ರಿಕಾ ವಿರುದ್ಧ ಆಸೀಸ್ ಇನ್ನಿಂಗ್ಸ್ ಹಾಗೂ 360 ರನ್‌ಗಳಲ್ಲಿ ಗೆದ್ದಿದ್ದು 2ನೇ ಅತಿದೊಡ್ಡ ಜಯ.