ಸಾರಾಂಶ
ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ದಕ್ಷಿಣ ಆಫ್ರಿಕಾ ವಿರುದ್ಧ ನ್ಯೂಜಿಲೆಂಡ್ ಮೊತ್ತ ಮೊದಲ ಸರಣಿ ಗೆಲುವು ದಾಖಲಿಸಿದೆ.
ಹ್ಯಾಮಿಲ್ಟನ್ (ನ್ಯೂಜಿಲೆಂಡ್): ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ದಕ್ಷಿಣ ಆಫ್ರಿಕಾ ವಿರುದ್ಧ ನ್ಯೂಜಿಲೆಂಡ್ ಮೊತ್ತ ಮೊದಲ ಟೆಸ್ಟ್ ಸರಣಿ ಗೆಲುವು ದಾಖಲಿಸಿದೆ. ಶುಕ್ರವಾರ ಕೊನೆಗೊಂಡ 2ನೇ ಟೆಸ್ಟ್‌ನಲ್ಲಿ ಕಿವೀಸ್ 7 ವಿಕೆಟ್ ಜಯಗಳಿಸಿತು.ಇದು 92 ವರ್ಷಗಳಲ್ಲಿ, 18 ಸರಣಿಗಳಲ್ಲಿ ಕಿವೀಸ್‌ಗೆ ಸಿಕ್ಕ ಮೊದಲ ಗೆಲುವು. 267 ರನ್ ಗುರಿ ಬೆನ್ನಟ್ಟಿದ ಕಿವೀಸ್‌ಗೆ ವಿಲಿಯಮ್ಸನ್(133) ಹಾಗೂ ಯಂಗ್ (60) ಅಮೋಘ ಆಟದ ಮೂಲಕ ಗೆಲುವು ಲಭಿಸಿತು. ಇದರೊಂದಿಗೆ ಸರಣಿಯನ್ನು 2-0 ಅಂತರದಲ್ಲಿ ಕೈವಶಪಡಿಸಿಕೊಂಡಿತು.ಮೊದಲ ಇನ್ನಿಂಗ್ಸ್‌ನಲ್ಲಿ ದಕ್ಷಿಣ ಆಫ್ರಿಕಾ 31 ರನ್ ಮುನ್ನಡೆ ಸಾಧಿಸಿತು ಮತ್ತು ತನ್ನ 2ನೇ ಇನ್ನಿಂಗ್ಸ್‌ನಲ್ಲಿ 235 ರನ್ ಗಳಿಸಿ, 267ರನ್‌ಗಳ ಗೆಲುವಿನ ನೀಡಿತ್ತು. 3 ನೇ ದಿನದಂತ್ಯಕ್ಕೆ 1 ವಿಕೆಟ್‌ಗೆ 40 ಗಳಿಸಿದ್ದ ನ್ಯೂಜಿಲೆಂಡ್‌ಗೆ ಜಯಗಳಿಸಲು 227 ರನ್‌ಗಳ ಅಗತ್ಯವಿತ್ತು.
4ನೇ ದಿನ ಮುರಿಯದ 152ರನ್‌ಗಳ ಜೊತೆಯಾಟವಾಡಿದ ಕೇನ್ ವಿಲಿಯಮ್ಸನ್ (133) ಹಾಗೂ ವಿಲ್ ಯಂಗ್ (60) ನ್ಯೂಜಿಲೆಂಡ್‌ಗೆ ಗೆಲುವು ತಂದುಕೊಟ್ಟರು.