ಸಾರಾಂಶ
ಜಿಂಬಾಬ್ವೆ ವಿರುದ್ಧ ನಡೆಯುತ್ತಿರುವ 2ನೇ ಟೆಸ್ಟ್‌ನಲ್ಲಿ ನ್ಯೂಜಿಲೆಂಡ್ ಬೃಹತ್ ಮೊತ್ತ ಕಲೆಹಾಕಿದೆ. ಜಿಂಬಾಬ್ವೆಯ 125 ರನ್‌ಗೆ ಉತ್ತರವಾಗಿ ಕಿವೀಸ್ 2ನೇ ದಿನದಂತ್ಯಕ್ಕೆ 3 ವಿಕೆಟ್‌ಗೆ 601 ರನ್ ಗಳಿಸಿದ್ದು, 476 ರನ್‌ಗಳ ದೊಡ್ಡ ಮುನ್ನಡೆ ಪಡೆದಿದೆ.
ಬುಲವಾಯೊ: ಜಿಂಬಾಬ್ವೆ ವಿರುದ್ಧ ನಡೆಯುತ್ತಿರುವ 2ನೇ ಟೆಸ್ಟ್‌ನಲ್ಲಿ ನ್ಯೂಜಿಲೆಂಡ್ ಬೃಹತ್ ಮೊತ್ತ ಕಲೆಹಾಕಿದೆ. ಜಿಂಬಾಬ್ವೆಯ 125 ರನ್‌ಗೆ ಉತ್ತರವಾಗಿ ಕಿವೀಸ್ 2ನೇ ದಿನದಂತ್ಯಕ್ಕೆ 3 ವಿಕೆಟ್‌ಗೆ 601 ರನ್ ಗಳಿಸಿದ್ದು, 476 ರನ್‌ಗಳ ದೊಡ್ಡ ಮುನ್ನಡೆ ಪಡೆದಿದೆ. ತಂಡ ಶನಿವಾರ ಮತ್ತಷ್ಟು ರನ್ ಸೇರಿಸುವ ವಿಶ್ವಾಸದಲ್ಲಿದೆ.
ಕಿವೀಸ್ ಪರ ಆರಂಭಿಕ ಆಟಗಾರ ಡೆವೋನ್ ಕಾನ್‌ವೇ 153 ರನ್ ಗಳಿಸಿ ಔಟಾದರು. ಮುರಿಯದ 4ನೇ ವಿಕೆಟ್‌ಗೆ ರಚಿನ್ ರವೀಂದ್ರ ಹಾಗೂ ಹೆನ್ರಿ ನಿಕೋಲ್ಸ್ 256 ರನ್ ಜೊತೆಯಾಟವಾಡಿದ್ದಾರೆ. ಸ್ಫೋಟಕ ಆಟವಾಡಿದ ರಚಿನ್ 139 ಎಸೆತಗಳಲ್ಲಿ 21 ಬೌಂಡರಿ, 2 ಸಿಕ್ಸರ್‌ಗಳೊಂದಿಗೆ ಔಟಾಗದೆ 165 ರನ್ ಸಿಡಿಸಿದ್ದಾರೆ. ನಿಕೋಲ್ಸ್ 245 ಎಸೆತಗಳಲ್ಲಿ 15 ಬೌಂಡರಿಗಳೊಂದಿಗೆ 150 ರನ್ ಗಳಿಸಿ 3ನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ.