ಪ್ರಸಕ್ತ ಸಾಲಿನ ಕೇಂದ್ರ ಗೃಹ ಸಚಿವರ ದಕ್ಷತಾ ಪುರಸ್ಕಾರಕ್ಕೆ ಹಾಸನ ಜಿಲ್ಲಾ ಹೆಚ್ಚುವರಿ ವರಿಷ್ಠಾಧಿಕಾರಿ ಎಂ.ಕೆ.ತಮ್ಮಯ್ಯ ಸೇರಿ ರಾಜ್ಯದ ಎಂಟು ಮಂದಿ ಪೊಲೀಸರು ಭಾಜನರಾಗಿದ್ದಾರೆ. ಹಾಸನ ಎಎಸ್ಪಿ ತಮ್ಮಯ್ಯ, ಇತರರಿಗೆ ಪ್ರಶಸ್ತಿ

 ಬೆಂಗಳೂರು : ಪ್ರಸಕ್ತ ಸಾಲಿನ ಕೇಂದ್ರ ಗೃಹ ಸಚಿವರ ದಕ್ಷತಾ ಪುರಸ್ಕಾರಕ್ಕೆ ಹಾಸನ ಜಿಲ್ಲಾ ಹೆಚ್ಚುವರಿ ವರಿಷ್ಠಾಧಿಕಾರಿ ಎಂ.ಕೆ.ತಮ್ಮಯ್ಯ ಸೇರಿ ರಾಜ್ಯದ ಎಂಟು ಮಂದಿ ಪೊಲೀಸರು ಭಾಜನರಾಗಿದ್ದಾರೆ.

ತನಿಖಾ ಕ್ಷೇತ್ರದ ಪುರಸ್ಕೃತರು:

ಎಂ.ಕೆ.ತಮ್ಮಯ್ಯ (ಎಎಸ್ಪಿ ಹಾಸನ), ಪ್ರಕಾಶ್ ರಾಥೋಡ್ (ಎಸಿಪಿ ಕೆ.ಜಿ.ಹಳ್ಳಿ ಉಪ ವಿಭಾಗ ಬೆಂಗಳೂರು), ಗುರುರಾಜ್ ಈಶ್ವರ್ ಕಲ್ಯಾಣಶೆಟ್ಟಿ (ಪಿಐ ಸಿಸಿಆರ್‌ಬಿ ಬೆಳಗಾವಿ ನಗರ), ಶ್ರೀಶೈಲ.ಕೆ.ಬ್ಯಾಕೋಡ್‌ (ಪಿಐ ಮುಡಲಗಿ ಠಾಣೆ ಬೆಳಗಾವಿ ಜಿಲ್ಲೆ), ರಮೇಶ್ ಚಾಯಗೋಳ್ (ಪಿಐ, ಎಸ್‌.ಜಿ.ಪಾಳ್ಯ ಠಾಣೆ ಬೆಂಗಳೂರು).

ಗುಪ್ತದಳ ವಿಭಾಗದ ಪುರಸ್ಕೃತರು:

ಸಿ.ವಿ.ದೀಪಕ್ (ಡಿವೈಎಸ್ಪಿ ಗುಪ್ತದಳ), ಕಲ್ಲಪ್ಪ.ಎಚ್‌.ಆತನೂರ್‌ (ಪಿಎಸ್‌ಐ ಗುಪ್ತದಳ ಬೆಂಗಳೂರು) ಹಾಗೂ ಟಿ.ಎಂ.ಮಧುಕುಮಾರ್ (ಸಿಎಚ್‌ಸಿ, ಎಎನ್‌ಎಫ್‌ ಕಾರ್ಕಳ).