ಅಮೆರಿಕದ ಜತೆ ಮಾತುಕತೆ ಇಲ್ಲ ಎಂದು ಇರಾನ್ ವಿದೇಶಾಂಗ ಸಚಿವ ಅರಗ್ಚಿ ಅವರು ಹೇಳಿದ್ದರೂ, ಅವರು ಶುಕ್ರವಾರ ಜಿನೇವಾಗೆ ಹೋಗಿದ್ದಾರೆ. ಅಲ್ಲಿ ಅವರು ಜರ್ಮನಿ, ಬ್ರಿಟನ್ ಹಾಗೂ ಪ್ರಾನ್ಸ್ ವಿದೇಶಾಂಗ ಸಚಿವರನ್ನು ಭೇಟಿಯಾಗಿ ಯುದ್ಧ ಸಂಬಂಧ ಮಾತುಕತೆ ನಡೆಸಲಿದ್ದಾರೆ ಎಂದು ಗೊತ್ತಾಗಿದೆ.
2024ರಲ್ಲಿ ಸ್ವಿಸ್ ಬ್ಯಾಂಕ್ಗಳಲ್ಲಿ ಭಾರತೀಯರು ಅಂದಾಜು 40000 ಕೋಟಿ ರು. ಹಣ ಇಟ್ಟಿದ್ದರು. 2023ಕ್ಕೆ ಹೋಲಿಸಿದರೆ ಈ ಪ್ರಮಾಣ 3 ಪಟ್ಟು ಹೆಚ್ಚು ಎಂದು ಸ್ವಿಜರ್ಲೆಂಡ್ನ ಕೇಂದ್ರೀಯ ಬ್ಯಾಂಕ್ ಬಿಡುಗಡೆ ಮಾಡಿದ ವರದಿ ತಿಳಿಸಿದೆ.
ಕಳೆದ 5 ದಿನದಿಂದ ಇಸ್ರೇಲ್ ಮತ್ತು ಇರಾನ್ ನಡುವೆ ನಡೆಯುತ್ತಿರುವ ಭೀಕರ ದಾಳಿ- ಪ್ರತಿದಾಳಿಗಳು ಮುಂದುವರೆದಿವೆ.
ಯುದ್ಧಕ್ಕೆ ಅಂತ್ಯ ಹಾಡಬೇಕಿದೆ. ಆದರೆ ಕದನವಿರಾಮದ ಮೂಲಕವಲ್ಲ. ನಾನು ಜಿ7 ಶೃಂಗದಿಂದ ಅರ್ಧಕ್ಕೇ ನಿರ್ಗಮಿಸುತ್ತಿರುವುದು ಕದನವಿರಾಮಕ್ಕಲ್ಲ. ಅದಕ್ಕಿಂತ ದೊಡ್ಡ ಕಾರಣವಿದೆ’ ಎಂದಿದ್ದಾರೆ ಟ್ರಂಪ್.
ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಹಿಂಸಾತ್ಮಕ ಹೋರಾಟ ನಡೆದಿರುವ ನಡುವೆಯೇ, ‘ಟ್ರಂಪ್ ಓರ್ವ ಸವಾಧಿಕಾರಿ. ಅವರು ತೊಲಗಬೇಕು’ ಎಂದು ಆಗ್ರಹಿಸಿ ದೇಶದ 50 ರಾಜ್ಯಗಳಲ್ಲಿ ವಾರಾಂತ್ಯದ ವೇಳೆ ‘ನೋ ಕಿಂಗ್ಸ್’ (ಬೇಡ ಸರ್ವಾಧಿಕಾರ) ಹೆಸರಿನ ಭಾರಿ ಪ್ರತಿಭಟನೆಗಳು ನಡೆದಿವೆ.
ಇರಾನಿನ ಅಣುಸ್ಥಾವರದ ಮೇಲೆ ಇಸ್ರೇಲಿನ ಭೀಕರ ದಾಳಿಯ ಬಳಿಕ ಉಂಟಾಗಿರುವ ಪ್ರತಿದಾಳಿಯಿಂದ ಇಸ್ರೇಲ್ ದೇಶಾದ್ಯಂತ ಹೈ ಅಲರ್ಟ್ ಸ್ಥಿತಿ ಇದೆ.
ಪ್ರಧಾನಿ ನರೇಂದ್ರ ಮೋದಿ ಭಾನುವಾರದಿಂದ 4 ದಿನಗಳ ಕಾಲ ಕೆನಡಾ, ಸೈಪ್ರಸ್ ಮತ್ತು ಕ್ರೊವೇಷಿಯಾ ದೇಶಗಳ ಪ್ರವಾಸ ಕೈಗೊಳ್ಳಲಿದ್ದಾರೆ.