ಮತ್ತೊಂದು ಯುವ ದಂಗೆಗೆ ಸರ್ಕಾರವೇ ಬಲಿ - ಮಡಗಾಸ್ಕರ್‌ ಕ್ಷಿಪ್ರಕ್ರಾಂತಿ

| N/A | Published : Oct 18 2025, 08:04 AM IST

Madagascar Gen Z protest
ಮತ್ತೊಂದು ಯುವ ದಂಗೆಗೆ ಸರ್ಕಾರವೇ ಬಲಿ - ಮಡಗಾಸ್ಕರ್‌ ಕ್ಷಿಪ್ರಕ್ರಾಂತಿ
Share this Article
  • FB
  • TW
  • Linkdin
  • Email

ಸಾರಾಂಶ

ಇತ್ತೀಚೆಗೆ ನೇಪಾಳದಲ್ಲಿ ಜೆನ್‌ ಝೀಗಳಿಂದ ನಡೆದ ದಂಗೆಯ ನೆನಪು ಮಾಸುವ ಮುನ್ನವೇ ಆಫ್ರಿಕಾದ ದ್ವೀಪರಾಷ್ಟ್ರ ಮಡಗಾಸ್ಕರ್‌ನಲ್ಲೂ ಯುವಸಮುದಾಯದ ಪ್ರತಿಭಟನೆಯಿಂದಾಗಿ ಕ್ಷಿಪ್ರಕ್ರಾಂತಿ ನಡೆದಿದೆ.

 ಅಂಟಾನನರಿವೊ (ಮಡಗಾಸ್ಕರ್) :  ಇತ್ತೀಚೆಗೆ ನೇಪಾಳದಲ್ಲಿ ಜೆನ್‌ ಝೀಗಳಿಂದ ನಡೆದ ದಂಗೆಯ ನೆನಪು ಮಾಸುವ ಮುನ್ನವೇ ಆಫ್ರಿಕಾದ ದ್ವೀಪರಾಷ್ಟ್ರ ಮಡಗಾಸ್ಕರ್‌ನಲ್ಲೂ ಯುವಸಮುದಾಯದ ಪ್ರತಿಭಟನೆಯಿಂದಾಗಿ ಕ್ಷಿಪ್ರಕ್ರಾಂತಿ ನಡೆದಿದೆ. ಅಧ್ಯಕ್ಷ ಆ್ಯಂಡ್ರಿ ರಾಜೋಲಿನಾ ಜೀವಭಯದಿಂದ ಫ್ರೆಂಚ್‌ ಮಿಲಿಟರಿ ವಿಮಾನದಲ್ಲಿ ದೇಶ ಬಿಟ್ಟು ಪಲಾಯನ ಮಾಡಿದ್ದಾರೆ. ಸೇನಾ ಮುಖ್ಯಸ್ಥ ಕ. ಮೈಕೆಲ್‌ ರಾಂಡ್ರಿಯಾನಿರಿನಾ ಅಧಿಕಾರವನ್ನು ಸೇನೆಯ ತೆಕ್ಕೆಗೆ ತೆಗೆದುಕೊಂಡಿದ್ದಾರೆ.

ಸುಮಾರು 3 ಕೋಟಿ ಜನಸಂಖ್ಯೆಯುಳ್ಳ ಮಡಗಾಸ್ಕರ್‌ನಲ್ಲಿ ಬಡತನ ತಾಂಡವವಾಡುತ್ತಿದೆ. ನೀರಿನ ಸಮಸ್ಯೆ, ವಿದ್ಯುತ್‌ ಅಭಾವ, ನಿರುದ್ಯೋಗ, ಬೆಲೆ ಏರಿಕೆ ಮೊದಲಾದ ಸಮಸ್ಯೆಗಳು ಜನರನ್ನು ಕಂಗಾಲಾಗಿಸಿವೆ. ಇದರಿಂದ ಕಂಗೆಟ್ಟ ಯುವಜನತೆ ತಕ್ಷಣ ಅಧ್ಯಕ್ಷರನ್ನು ಕೆಳಗಿಳಿಸಬೇಕು, ಹೊಸ ಸರ್ಕಾರವನ್ನು ರಚಿಸಬೇಕು ಎಂಬ ಬೇಡಿಕೆಯಿಟ್ಟು 3 ವಾರದಿಂದ ಪ್ರತಿಭಟನೆ ಆರಂಭಿಸಿದ್ದರು. ಹೋರಾಟದ ಕಾವು ತೀವ್ರವಾಗುತ್ತಿದ್ದಂತೆ ಅಧ್ಯಕ್ಷ ರಾಜೋಲಿನಾ ದೇಶ ಬಿಟ್ಟು ಪಲಾಯನ ಮಾಡಿದ್ದಾರೆ. ಸೇನಾ ಮುಖ್ಯಸ್ಥ ರಾಂಡ್ರಿಯಾನಿರಿನಾ ಹೊಸ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಆದರೆ ಈ ರೀತಿ ಸೇನೆಯು ಕ್ಷಿಪ್ರಕ್ರಾಂತಿ ಮೂಲಕ ಅಧಿಕಾರ ವಶಪಡಿಸಿಕೊಂಡಿದ್ದನ್ನು ವಿಶ್ವಸಂಸ್ಥೆ ಖಂಡಿಸಿದೆ.

Read more Articles on