ಧರ್ಮಸ್ಥಳದ ಮೇಲಿನ ಷಡ್ಯಂತ್ರ ಎನ್‌ಐಎ, ಇಡಿ ತನಿಖೆಗೆ ವಿಹಿಂಪ ಆಗ್ರಹ
Aug 27 2025, 01:00 AM ISTಬಾಳೆಹೊನ್ನೂರು, ಹಿಂದೂಗಳ ಆರಾಧ್ಯ ಕ್ಷೇತ್ರ ಧರ್ಮಸ್ಥಳದ ಮೇಲೆ ನಡೆದಿರುವ ಷಡ್ಯಂತ್ರ ರಾಷ್ಟ್ರೀಯ ಸುರಕ್ಷತೆಗೆ ಸವಾಲೊಡ್ಡುವ ಪ್ರಕರಣ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಹಾಗೂ ಜಾರಿ ನಿರ್ದೇಶನಾಲಯದ (ಇಡಿ) ಮೂಲಕ ತನಿಖೆ ನಡೆಸಬೇಕು ಎಂದು ವಿಎಚ್‌ಪಿ ಹಾಸನ ವಿಭಾಗದ ಸಹ ಕಾರ್ಯದರ್ಶಿ ಆರ್.ಡಿ.ಮಹೇಂದ್ರ ಒತ್ತಾಯಿಸಿದ್ದಾರೆ.