ಟೂರಿಸ್ಟ್ ವೀಸಾ ಪಡೆದು ದುಬೈಗೆ ಹೋಗಬಯಸುವ ಪ್ರವಾಸಿಗರಿಗೆ ಹೊಸ ನಿಯಮ ರೂಪಿಸಲಾಗಿದೆ. ಈ ಸಂಬಂಧ ಅಲ್ಲಿನ ವಲಸೆ ಇಲಾಖೆ ಬಿಡುಗಡೆ ಮಾಡಿರುವ ಮಾರ್ಗಸೂಚಿಯ ಪ್ರಕಾರ ಹೋಟೆಲ್ ಕಾಯ್ದಿರಿಸಿದ ಬಗೆಗಿನ ಮಾಹಿತಿ ಹಾಗೂ ಮರಳುವ ಟಿಕೆಟ್ನ ಪ್ರತಿ ಸಲ್ಲಿಸುವುದು ಕಡ್ಡಾಯ ಮಾಡಲಾಗಿದೆ.
ಅನೀಶ್ ತೇಜೇಶ್ವರ್ ಹಾಗೂ ಮಿಲನಾ ನಾಗರಾಜ್ ಜೋಡಿಯಾಗಿ ನಟಿಸಿರುವ ಆರಾಮ್ ಅರವಿಂದ್ ಸ್ವಾಮಿ ಚಿತ್ರದ ಟಿಕೆಟ್ ದರ ರು.99. ಇದು ಚಿತ್ರತಂಡವೇ ಪ್ರೇಕ್ಷಕರಿಗೆ ಕೊಟ್ಟಿರುವ ಆಫರ್. ನವೆಂಬರ್ 22ಕ್ಕೆ ಸಿನಿಮಾ ಅದ್ದೂರಿಯಾಗಿ ತೆರೆಗೆ ಬರುತ್ತಿದೆ.
ಬ್ರಿಟಿಷ್ ರಾಕ್ ಬ್ಯಾಂಡ್ ಕೋಲ್ಡ್ ಪ್ಲೇ ಆಯೋಜಿಸಿರುವ ಸಂಗೀತ ಕಾರ್ಯಕ್ರಮ ಹಾಗೂ ಗಾಯಕ ದಲ್ಜೀತ್ ದೊಸಾಂಜ್ ಅವರ ದಿಲ್ಲುಮಿನಾಟಿ ಕಾರ್ಯಕ್ರಮಗಳ ಅಕ್ರಮ ಟಿಕೆಟ್ ಮಾರಾಟದ ಸಂಬಂಧ ದೆಹಲಿ, ಮುಂಬೈ, ಜೈಪುರ, ಚಂಡೀಗಢ ಹಾಗೂ ಬೆಂಗಳೂರಿನ ಕೆಲ ಪ್ರದೇಶಗಳ ಮೇಲೆ ಜಾರಿ ನಿರ್ದೇಶನಾಲಯ (ಇ.ಡಿ.) ದಾಳಿ ನಡೆಸಿದೆ.
ಕಾಂಗ್ರೆಸ್ ಹೈಕಮಾಂಡ್, ಶಿಗ್ಗಾಂವಿ ಕ್ಷೇತ್ರಕ್ಕೆ ಸತತವಾಗಿ ಆರನೇ ಬಾರಿಗೆ ಮುಸ್ಲಿಂ ಸಮುದಾಯವನ್ನು ಆಯ್ಕೆ ಮಾಡಿದ್ದು, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸೋಲುಂಡಿದ್ದ ಯಾಸೀರ್ ಅಹಮದ್ ಪಠಾಣ್ ಅವರಿಗೆ ಟಿಕೆಟ್ ದಯಪಾಲಿಸಿದೆ.