ಸಾಲ ವಸೂಲು ನೆಪದಲ್ಲಿ ಬೆದರಿಕೆ, ಕ್ರಿಮಿನಲ್ ಕೇಸ್ ಸಲ್ಲದು
Oct 26 2025, 02:00 AM ISTತನ್ನ ಮದುವೆಗೆ 2018ರಲ್ಲಿ ಪಡೆದಿದ್ದ ₹1 ಲಕ್ಷ ಸಾಲದ ಹಣ ಮರು ಪಾವತಿಸಿದ್ದರೂ ಭದ್ರತೆಗೆ ನೀಡಿದ್ದ ನನ್ನ ಬ್ಯಾಂಕ್ ಖಾತೆಯ ಖಾಲಿ ಚೆಕ್ ವಾಪಸ್ ನೀಡದೇ, ಕ್ರಿಮಿನಲ್ ಕೇಸ್ ದಾಖಲಿಸುವುದಾಗಿ ಬೆದರಿಸಲಾಗುತ್ತಿದೆ.  ಇದರ ವಿರುದ್ಧ ಸೂಕ್ತ ಕ್ರಮ ಕೈಗೊಂಡು, ತಮಗೆ ನ್ಯಾಯ ಕೊಡಿಸುವಂತೆ ಚನ್ನಗಿರಿ ತಾಲೂಕಿನ ಸಂಗಾಹಳ್ಳಿ ಗ್ರಾಮದ ಪರಿಶಿಷ್ಟ ಜಾತಿ ಛಲವಾದಿ ಸಮಾಜದ ಬಡರೈತ ಎಸ್.ಬಿ.ಅಶೋಕ ಒತ್ತಾಯಿಸಿದ್ದಾರೆ.