ಆಗ ಡಿಜಿಟಲ್ ಅರೆಸ್ಟ್, ಈಗ ಉಗ್ರರೆಂದು ಬೆದರಿಕೆ!
Jan 08 2025, 12:17 AM ISTಕನ್ನಡಪ್ರಭ ವಾರ್ತೆ ವಿಜಯಪುರ ಕಳೆದ ನಾಲ್ಕು ತಿಂಗಳ ಹಿಂದೆ ಡಿಜಿಟಲ್ ಅರೆಸ್ಟ್‌ಗೆ ಒಳಗಾಗಿದ್ದ ವಿಜಯಪುರದ ಸಾಮಾಜಿಕ ಕಾರ್ಯಕರ್ತ ಸಂತೋಷ ಚೌಧರಿಗೆ ಇದೀಗ ಮತ್ತೆ ಆನ್‌ಲೈನ್ ಖದೀಮರ ಕಾಟ ಶುರುವಾಗಿದೆ. ಮತ್ತೆ ಕರೆ ಮಾಡಿ ಡಿಜಿಟಲ್ ಅರೆಸ್ಟ್ ಮಾಡಿದ್ದಾರೆ. ಕಾಲ್ ರಿಸೀವ್ ಮಾಡಿ ಮಾತನಾಡಿರುವ ಸಂತೋಷ ಚೌಧರಿ ಹಿಂದೆ ನೀವು ಹೀಗೆಯೇ ಕರೆ ಮಾಡಿದ್ದೀರಿ, ಆಗ ನಾನು ಮಾತನಾಡಿದ್ದು, ಇಡೀ ದೇಶವೇ ನೋಡಿದೆ. ಮತ್ತೆ ಮತ್ತೆ ನನಗೆ ಏಕೆ ಕರೆ ಮಾಡುತ್ತೀರಿ ಎಂದು ನಡೆದ ಘಟನೆಯನ್ನು ನೆನಪಿಸಿದ್ದಾರೆ. ಅತ್ತಕಡೆಯಿಂದ ಕುಪಿತಗೊಂಡ ಡಿಜಿಟಲ್ ಅರೆಸ್ಟ್ ದಂಧೆಕೋರರು ದೇಶದ ಪ್ರಧಾನಿ, ಪೊಲೀಸ್ ಇಲಾಖೆ ಸೇರಿದಂತೆ ಎಲ್ಲರಿಗೂ ವಾಚಾಮಗೋಚರವಾಗಿ ಬೈಯ್ದಾಡಿದ್ದಾರೆ.