ಕಾಡಾನೆಗೆ ರೇಡಿಯೋ ಕಾಲರ್‌ ಅಳವಡಿಕೆ ಯಶಸ್ವಿ

Mar 28 2025, 12:30 AM IST
ಮಲೆನಾಡು ಭಾಗದಲ್ಲಿ ಬೆಳೆ ಹಾಗೂ ಪ್ರಾಣಹಾನಿಗೆ ಮುಂದಾಗಿದ್ದ ಕಾಡಾನೆಗಳ ಕಾರ್ಯಾಚರಣೆ ಮುಂದುವರೆದಿದ್ದು, ಗುರುವಾರ ತಾಲೂಕಿನ ಬ್ಯಾದನೆ ಗ್ರಾಮದಲ್ಲಿ ಭುವನೇಶ್ವರಿ ಗುಂಪಿನ ಎರಡು ಗಂಡಾನೆಗಳಿಗೆ ರೇಡಿಯೋ ಕಾಲ‌ರ್ ಅಳವಡಿಸಲಾಯಿತು. ಡಾ.ರಮೇಶ್ ನೇತೃತ್ವದ ತಂಡ ಕಾಡಾನೆಗೆ ಅರವಳಿಕೆ ಮದ್ದು ನೀಡಿ ಬಳಿಕ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಈಟಿಎಫ್ ಸಿಬ್ಬಂದಿಯ ಸಹಯೋಗದಲ್ಲಿ ರೇಡಿಯೋ ಕಾಲರ್ ಅಳವಡಿಸಲಾಯಿತು. ಕಾಡಾನೆಗಳ ಪತ್ತೆ ಹಾಗೂ ಅವುಗಳ ಚಲನವಲನದ ಮಾಹಿತಿ ಪಡೆಯಲು ಕಾಡಾನೆಗೆ ರೇಡಿಯೋ ಕಾಲರ್ ಅಳವಡಿಕೆಗೆ ಅರಣ್ಯ ಇಲಾಖೆ ಮುಂದಾಗಿದ್ದು ಬೇಲೂರು ತಾಲೂಕಿನ ಬ್ಯಾದನೆ ಗ್ರಾಮದಲ್ಲಿ ಭುವನೇಶ್ವರಿ ಗುಂಪಿನ ಗಂಡಾನೆಗೆ ರೇಡಿಯೋ ಕಾಲ‌ರ್ ಅಳವಡಿಕೆ ಯಶಸ್ವಿಯಾಗಿದೆ.