‘ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರ ಆಪ್ತ ಕಾರ್ಯದರ್ಶಿಯಂತೆ ಇದ್ದರು. ತಮ್ಮ ಸರ್ಕಾರ ಮಾಡಿದ ಒಳ್ಳೆಯ ಕೆಲಸಗಳ ಶ್ರೇಯವನ್ನೂ ಅವರು ಪಡೆಯುತ್ತಿರಲಿಲ್ಲ’ ಎಂದು ಪ್ರಧಾನಿಗಳ ಕಚೇರಿ ಬಗ್ಗೆ ಜೆಎನ್‌ಯುನ ಅಧ್ಯಾಪಕರೊಬ್ಬರು ಬರೆದ ಪುಸ್ತಕದಲ್ಲಿ ದಾಖಲಿಸಲಾಗಿದೆ.
‘1999ರಲ್ಲಿ ಅಂತರ್ ಸಂಸದೀಯ ಒಕ್ಕೂಟದ (ಐಪಿಯು) ಅಧ್ಯಕ್ಷೆಯಾಗಿ ಆಯ್ಕೆಯಾದ ವಿಚಾರವನ್ನು ತಿಳಿಸಲು ಬರ್ಲಿನ್ನಿಂದ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರಿಗೆ ಫೋನ್ ಮಾಡಿದ್ದೆ. ಆದರೆ ಅವರ ಸಿಬ್ಬಂದಿ ಮೇಡಂ ಬ್ಯುಸಿ ಇದ್ದಾರೆ ಎಂದು ಹೇಳಿ ಒಂದು ಗಂಟೆ ಕಾಯಿಸಿದ್ದರು