ಕರಾಟೆಯಲ್ಲಿ ಶರತ್, ಹರ್ಷಿಕಾ ಚಾಂಪಿಯನ್
Jul 25 2024, 01:23 AM ISTಬಾಲಕಿಯರ ವಿಭಾಗದಲ್ಲಿ ಮೈಸೂರಿನ ಹರ್ಷಿಕಾ ಅವರು ಚಾಂಪಿಯನ್‌ಶಿಪ್ ಕರಾಟೆ ಪಂದ್ಯಾವಳಿಯಲ್ಲಿ ಗೆಲುವನ್ನು ಪಡೆದು ಟ್ರೋಫಿ ಹಾಗೂ ನಗದು ಬಹುಮಾನ ಪಡೆದರು. ಆಯೋಜಕರಾದ ಜೇನ್ ಸ್ಪೋರ್ಟ್ಸ್ ಮಾರ್ಷಲ್ ಆರ್ಟ್ಸ್ ಅಕಾಡೆಮಿ ಸಂಸ್ಥಾಪಕ ಅಧ್ಯಕ್ಷ ಶಿವು ವಿಜೇತ ಕ್ರೀಡಾಪಟುಗಳಿಗೆ ಪ್ರಶಸ್ತಿ ವಿತರಿಸಿ ಮಾತನಾಡಿ, ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳೂ ಕರಾಟೆ ಕಲಿಯುವ ಆಸಕ್ತಿ ಹೊಂದಿದ್ದು, ಉತ್ತಮವಾಗಿ ತರಬೇತಿ ನೀಡಿದರೆ ಅಂತಾರಾಷ್ಟ್ರೀಯ ಮಟ್ಟದ ಕ್ರೀಡೆಯಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆಯಲು ಅರ್ಹರಾಗಿರುತ್ತಾರೆ,