ತನ್ನನ್ನು ಚೀನಾ ದೇಶದ ಭಾಗ ಎಂದು ಒಪ್ಪಿಕೊಳ್ಳಲು ನಿರಾಕರಿಸಿದ ತೈವಾನ್ ವಿರುದ್ಧ ಮತ್ತೆ ಸೇನಾಬಳ ಬಳಸಿ ಬೆದರಿಕೆ ಹಾಕುವ ತಂತ್ರವನ್ನು ಚೀನಾ ಮಾಡಿದೆ. ಈ ಮೂಲಕ ಈಗಾಗಲೇ ಉದ್ವಿಗ್ನವಾಗಿರುವ ತೈವಾನ್ ಜಲಸಂಧಿ ಪ್ರದೇಶವನ್ನು ಮತ್ತಷ್ಟು ತ್ವೇಷಮಯಗೊಳಿಸಿದೆ.
ತೈವಾನ್‌ನ ನೂತನ ಅಧ್ಯಕ್ಷ ಲಾಯ್ ಚಿಂಗ್ ಟೆ ಚೀನಿ ಸಾರ್ವಭೌಮತ್ವದ ಕುರಿತು ಆಕ್ಷೇಪವೆತ್ತಿ ಸ್ವಾತಂತ್ರ್ಯದ ಕುರಿತು ಮಾತನಾಡಿದ ಬೆನ್ನಲ್ಲೇ ಸಿಟ್ಟಿಗೆದ್ದಿರುವ ಕಮ್ಯುನಿಸ್ಟ್ ಸರ್ಕಾರ, ತೈವಾನ್ ಸುತ್ತಲೂ ಭಾರೀ ಸಮರಾಭ್ಯಾಸದ ಮೂಲಕ ದಿಗ್ಬಂಧನ ವಿಧಿಸಿದೆ.