ಕಲ್ಲು ತೂರಾಟ: ಸಹಜ ಸ್ಥಿತಿಗೆ ಮರಳಿದ ಮದ್ದೂರು ಪಟ್ಟಣ
Sep 12 2025, 12:06 AM ISTಗಣೇಶ ವಿಸರ್ಜನಾ ಮೆರವಣಿಗೆ ಮೇಲೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ ಮೂರು ದಿನಗಳ ಬಳಿಕ ಮದ್ದೂರು ಈಗ ಸಹಜ ಸ್ಥಿತಿಗೆ ಮರಳಿದೆ. ಮೂರು ದಿನಗಳಿಂದ ವ್ಯಾಪಾರ-ವಹಿವಾಟನ್ನು ಸಂಪೂರ್ಣವಾಗಿ ಬಂದ್ ಮಾಡಿದ್ದ ವರ್ತಕರು, ಗುರುವಾರ ಬೆಳಗ್ಗೆಯಿಂದ ಅಂಗಡಿ-ಮುಂಗಟ್ಟುಗಳನ್ನು ತೆರೆದು ವ್ಯಾಪಾರ-ವ್ಯವಹಾರ ನಡೆಸಿದರು.