ಅಸಮರ್ಪಕ ಸಾರಿಗೆ ಅಕ್ಕಿ ನೋ ಸ್ಟಾಕ್‌ಗೆ ಕಾರಣ!
Mar 19 2025, 12:45 AM ISTಅಥಣಿ ಮತಕ್ಷೇತ್ರ ಒಳಗೊಂಡಂತೆ ಚಿಕ್ಕೋಡಿ ಲೋಕಸಭಾ ವ್ಯಾಪ್ತಿಯ ಕೆಲವು ಭಾಗಗಳಲ್ಲಿ ಸರ್ಕಾರದ ಅನ್ನಭಾಗ್ಯ ಯೋಜನೆ ಅಡಿಯಲ್ಲಿ ಹಂಚಿಕೆ ಆಗಬೇಕಾಗಿದ್ದ ಅಕ್ಕಿ ಕೊರತೆಯಾಗಿದೆ. ಇದರಿಂದ ವಿತರಕರು ನ್ಯಾಯಬೆಲೆ ಅಂಗಡಿಗೆ ಬರುತ್ತಿರುವ ಗ್ರಾಹಕರಿಗೆ ಅಕ್ಕಿ ಬಂದಿಲ್ಲವೆಂದು ಹೇಳಿ ಕಳಿಸುತ್ತಿರುವ ದೃಶ್ಯ ಎಲ್ಲ ಕಡೆ ಕಂಡು ಬಂದಿದೆ. ಶೇ.55 ಫಲಾನುಭಾವಿಗಳು ಇನ್ನೂ ಅಕ್ಕಿಯನ್ನು ಪಡೆಯಬೇಕಾಗಿದೆ. ಪ್ರತಿ ಫಲಾನುಭವಿಗೆ ಈ ತಿಂಗಳು ಒಟ್ಟು 15 ಕೆಜಿ ಅಕ್ಕಿಯನ್ನು ಸರ್ಕಾರ ಪೂರೈಸಬೇಕಾಗಿದೆ. ಅದು ಸಾಧ್ಯವಾಗುತ್ತಿಲ್ಲ. ಆದರೆ, ಇದಕ್ಕೆ ಕಾರಣ ಅಕ್ಕಿ ಸ್ಟಾಕ್ ಇದ್ದರೂ, ಅದನ್ನು ಅದಿಷ್ಟನ್ನೂ ಪೂರೈಸಲು ಅಸಮರ್ಪಕ ಸಾರಿಗೆ ವ್ಯವಸ್ಥೆ ಕಾರಣ ಎನ್ನಲಾಗಿದೆ.