ಮುನಿಯಪ್ಪ ನವರೇ ನಿಮ್ಮ ಅಕ್ಕಿ ಎಲ್ಲಿ: ಸಿ.ಟಿ. ರವಿ ಪ್ರಶ್ನೆ
Feb 22 2024, 01:47 AM ISTಮುನಿಯಪ್ಪ ನವರೇ ನಿಮ್ಮ ಅಕ್ಕಿ ಎಲ್ಲಿ ? ಅನ್ನಭಾಗ್ಯದ ಅಕ್ಕಿ ಎಲ್ಲಿ ಕೊಟ್ಟಿದ್ದೀರಿ ಎಂದು ಮಾಜಿ ಸಚಿವ ಸಿ.ಟಿ.ರವಿ ಪ್ರಶ್ನಿಸಿದ್ದಾರೆ.ಭಾರತ್ ಬ್ರಾಂಡ್ ಅಕ್ಕಿ ಕಳಪೆಯಾಗಿದೆ ಎಂಬ ಮುನಿಯಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿರುವ ಸಿ.ಟಿ.ರವಿ, ರಾಜ್ಯ ಕಾಂಗ್ರೆಸ್ ಸರ್ಕಾರ ಕೇಂದ್ರ ಕೊಡುವ ಅಕ್ಕಿಯನ್ನೇ ಕಡಿತ ಮಾಡಿದೆ. ನಿಮ್ಮ ಪ್ರಣಾಳಿಕೆಯಂತೆ 10 ಕೆಜಿ ಅಕ್ಕಿ ಹೋಗಲಿ, 10 ಗ್ರಾಂ. ಅಕ್ಕಿಯಾದರೂ ನೀಡಿದ್ರಾ ? ಆಂಧ್ರ, ತೆಲಂಗಾಣ ಜತೆ ಮಾತನಾಡುತ್ತೇವೆಂದು ಜನರ ಕಿವಿಗೆ ಹೂವು ಮುಡಿಸಿದ್ದೀರಾ ಎಂದರು.