ಹದಿಹರೆಯದಲ್ಲಿ ದಾರಿತಪ್ಪಿದರೆ ಆರೋಗ್ಯ ಹಾಳು
Jan 15 2025, 12:46 AM ISTಹದಿಹರೆಯದ ಮಕ್ಕಳು ದಾರಿತಪ್ಪಿ ತಮ್ಮ ಆರೋಗ್ಯ ಹಾಳು ಮಾಡಿಕೊಳ್ಳಬಾರದು ಎಂದು ಶ್ರವಣಬೆಳಗೊಳ ಇಂದಿರಾ ಗಾಂಧಿ ವಸತಿ ಶಾಲೆಯ ಪ್ರಾಂಶುಪಾಲ ಎ. ಬಿ. ಚೌಗಲೇ ಮಕ್ಕಳಿಗೆ ತಿಳಿ ಹೇಳಿದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಹಾಗೂ ಇಂದಿರಾಗಾಂಧಿ ವಸತಿ ಶಾಲೆ ಸಂಯುಕ್ತ ಆಶ್ರಯದಲ್ಲಿ, ಸ್ವಾಸ್ಥ ಸಂಕಲ್ಪ ಕಾರ್ಯಕ್ರಮ ಮಾದಕ ವಸ್ತುಗಳ ವಿರುದ್ಧ ಜಾಗೃತಿ ಮೂಡಿಸುವ ಉಪನ್ಯಾಸ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಕ್ಕಳು ದುಶ್ಚಟಕ್ಕೆ ಬಲಿಯಾಗಬಾರದು, ಉತ್ತಮ ಸ್ನೇಹಿತರ ಸಂಪಾದನೆ ಮಾಡಿ, ಪುಸ್ತಕಗಳನ್ನೇ ಸ್ನೇಹಿತರನ್ನಾಗಿ ಮಾಡಿಕೊಳ್ಳಿ, ದುಶ್ಚಟಗಳಿಗೆ ಬಲಿಯಾಗಿ ದಾರಿ ತಪ್ಪಿದರೆ ಕುಟುಂಬ, ಸಮಾಜಕ್ಕೆ, ಕಳಂಕವಾಗುತ್ತೀರ. ಅತಿಯಾದ ಮೊಬೈಲ್ ಬಳಕೆ ಕೂಡ ದುಶ್ಚಟವಾಗುತ್ತದೆ ಎಂದರು.