ಕಾಂಗ್ರೆಸ್ ಅಂದ್ರೆ ತೋಡೋ ಪಾರ್ಟಿ: ರವಿಕುಮಾರ್
Feb 03 2024, 01:48 AM ISTಬಾಗಲಕೋಟೆ: ಈ ಕಾಂಗ್ರೆಸ್ನವರಿಗೆ ಬುದ್ಧಿಭ್ರಮಣೆಯಾಗಿದೆ. ಒಂದು ಕಡೆ ರಾಹುಲ್ ಗಾಂಧಿ ಭಾರತ ಜೋಡೋ ಅಂತಾರೆ, ಮತ್ತೊಂದು ಕಡೆ ಡಿ.ಕೆ.ಸುರೇಶ ಭಾರತ ತೋಡೋ ಎನ್ನುತ್ತಾರೆ ಎಂದು ಬಿಜೆಪಿ ಮುಖಂಡ ಎನ್.ರವಿಕುಮಾರ್ ಕುಟುಕಿದರು. ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇವರು ಈ ಹಿಂದೆಯೂ ಭಾರತ ತೋಡೋ ಮಾಡಿದ್ದಾರೆ. ಹಿಂದೂಸ್ಥಾನ್ -ಪಾಕಿಸ್ತಾನ ಎಂದು ವಿಭಜಿಸಿದವರು ಇವರೇ ಎಂದು ಆರೋಪಿಸಿದರು.