ಬೇಸಿಗೆಯಲ್ಲಿ ಕುಡಿಯುವ ನೀರು, ಮೇವಿನ ಕೊರತೆ ಆಗದಿರಲಿ
Nov 24 2023, 01:30 AM ISTನರೇಗಾ ಅಡಿಯಲ್ಲಿ ತಾಪಂ ಇ.ಒ.ಗಳು ಕಾರ್ಮಿಕರಿಗೆ ಕೆಲಸಗಳನ್ನು ನೀಡಬೇಕು. ಸಾಗರ ಮತ್ತು ಸೊರಬದಲ್ಲಿ ಬೇಡಿಕೆ ಹೆಚ್ಚಿದೆ. ಗುರುತಿಸಿ ಕೆಲಸಗಳನ್ನು ನೀಡಬೇಕು. ಮಳೆ ಬಂದು ಬಿದ್ದಿರುವ, ಹಾನಿಗೊಳಗಾದ ಮನೆಗಳ ಜಿಪಿಎಸ್ ಬಾಕಿ ಇರುವುದನ್ನು ಪಿಡಿಒಗಳು ಪರಿಶೀಲಿಸಿ ಪೂರ್ಣಗೊಳಿಸಬೇಕು ಎಂದು ಸೂಚನೆ ನೀಡಿದರು. ಎಲ್ಲ ತಹಸೀಲ್ದಾರ್, ಇ.ಒ.ಗಳು, ಪಿ.ಡಿ.ಒ.ಗಳ ಜೊತೆಗೂಡಿ ಪ್ರತಿ 15 ದಿನಗಳಿಗೆ ಒಮ್ಮೆ ಬರ ನಿರ್ವಹಣೆ ಕುರಿತು ಪ್ರಗತಿ ಪರಿಶೀಲನೆ ಸಭೆ ನಡೆಸಬೇಕು. ಜಾನುವಾರು ಮೇವಿಗೆ ಕೊರತೆ ಆಗದಂತೆ ಕ್ರಮ ವಹಿಸಬೇಕು ಎಂದು ತಿಳಿಸಿದರು.