ಸಮರ್ಪಕ ಕುಡಿಯುವ ನೀರು ಹರಿಸುವಂತೆ ದೊಡ್ಡಪಾಳ್ಯ ಗ್ರಾಮಸ್ಥರ ಪ್ರತಿಭಟನೆ
Apr 06 2024, 12:55 AM ISTಗ್ರಾಮದ ಮಾರಿಗುಡಿ ಬೀದಿಯಲ್ಲಿ ಸುಮಾರು 50ಕ್ಕೂ ಹೆಚ್ಚು ಮನೆಗಳಿದ್ದು, ಹಲವು ದಿನಗಳಿಂದ ನಮಗೆ ಕುಡಿಯಲು ನೀರು ಹರಿಸದೆ ತೊಂದರೆ ಅನುಭವಿಸುವಂತಾಗಿದೆ. ಈ ಸಂಬಂಧ ಗ್ರಾಪಂ ಅಧಿಕಾರಿಗಳನ್ನು ಪ್ರಶ್ನಿಸಲು ಕಚೇರಿಗೆ ಬಂದರೆ ಗುಮಾಸ್ತ ಹೊರತುಪಡಿಸಿ ಬೇರಾರು ಸಿಗುತ್ತಿಲ್ಲ. ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ, ಕಾರ್ಯದರ್ಶಿ ಹಾಗೂ ಬಿಲ್‌ಕಲೆಕ್ಟರ್ ನಿತ್ಯ ಹಾಜರಾತಿಗೆ ಸಹಿ ಹಾಕಿ ಹೊರ ಹೋಗುತ್ತಿದ್ದಾರೆ. ಇವರ್‍ಯಾರು ನಮ್ಮ ಕೈಗೆ ಸಿಗುತ್ತಿಲ್ಲ.